ಕರ್ನಾಟಕ

karnataka

ETV Bharat / state

ಪಾರ್ಟಿಯಲ್ಲಿ ನಾನು ಮಿಂಗಲ್ ಆದಷ್ಟು ಸಮಸ್ಯೆಗೆ ಪರಿಹಾರ ಸಿಗುತ್ತೆ: ಡಿವಿಎಸ್ ಹೇಳಿಕೆ ಹಿಂದಿನ ಅರ್ಥವೇನು? - DVS Reaction about BY election Ticket at Bengaluru

ಸದಾನಂದ ಗೌಡರು ನಾಲ್ಕೂವರೆ ವರ್ಷ ಪಕ್ಷದಲ್ಲಿ ಅಧ್ಯಕ್ಷರಾಗಿದ್ರು, ಯಾವುದೇ ಗೊಂದಲ ಇರಲಿಲ್ಲ ಸದಾನಂದ ಗೌಡರು ಪಾರ್ಟಿಯಲ್ಲಿ ಎಷ್ಟು ಮಿಂಗಲ್ ಆಗ್ತಾರೋ ಅಷ್ಟು ಸಮಸ್ಯೆ ಪರಿಹಾರ ಆಗುತ್ತೆ. ಈಗ ಯಾವುದೇ ಗೊಂದಲ ಇಲ್ಲ. ನಮ್ಮಲ್ಲಿ ವ್ಯಕ್ತಿ ನೋಡಿ ಮತ ಹಾಕಲ್ಲ, ಪಕ್ಷದ ಚಿಹ್ನೆ ನೋಡಿ ಮತ ಹಾಕುತ್ತಾರೆ ಎಂದರು.

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ

By

Published : Oct 23, 2019, 10:27 PM IST

ಬೆಂಗಳೂರು:ಪಾರ್ಟಿಯಲ್ಲಿ ನಾನು ಎಷ್ಟು ಮಿಂಗಲ್ ಆಗ್ತೀನೋ ಅಷ್ಟು ಸಮಸ್ಯೆ ಪರಿಹಾರ ಆಗುತ್ತೆ ಎನ್ನುವ ಮೂಲಕ ಪಕ್ಷದಲ್ಲಿ ತಮ್ಮ ಪ್ರಾಮುಖ್ಯತೆ ಇದೆ ಎನ್ನುವುದನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪ್ರತಿಪಾದಿಸಿಕೊಂಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಮಹಾಲಕ್ಷ್ಮಿ ಲೇಔಟ್ ಟಿಕೆಟ್ ಗೊಂದಲವಿಲ್ಲ. ಸದಾನಂದ ಗೌಡರು ನಾಲ್ಕೂವರೆ ವರ್ಷ ಪಕ್ಷದಲ್ಲಿ ಅಧ್ಯಕ್ಷರಾಗಿದ್ರು, ಯಾವುದೇ ಗೊಂದಲ ಇರಲಿಲ್ಲ ಸದಾನಂದ ಗೌಡರು ಪಾರ್ಟಿಯಲ್ಲಿ ಎಷ್ಟು ಮಿಂಗಲ್ ಆಗ್ತಾರೊ ಅಷ್ಟು ಸಮಸ್ಯೆ ಪರಿಹಾರ ಆಗುತ್ತೆ. ಈಗ ಯಾವುದೇ ಗೊಂದಲ ಇಲ್ಲ. ನಮ್ಮಲ್ಲಿ ವ್ಯಕ್ತಿ ನೋಡಿ ಮತ ಹಾಕಲ್ಲ, ಪಕ್ಷದ ಚಿಹ್ನೆ ನೋಡಿ ಮತ ಹಾಕುತ್ತಾರೆ. ಅಭ್ಯರ್ಥಿ ಆಯ್ಕೆಯನ್ನು ಪಕ್ಷದ ,ರಾಷ್ಟ್ರೀಯ ನಾಯಕರು ಮಾಡಲಿದ್ದಾರೆ ಎಂದರು.

ಕೇಂದ್ರ ಸಚಿವ ಡಿವಿ ಸದಾನಂದ ಗೌಡ

ಮಾಜಿ ಸಚಿವ ಡಿ.ಕೆ ಶಿವಕುಮಾರ್​​ಗೆ​ ಜಾಮೀನು ಸಿಕ್ಕ ಕುರಿತು ಪ್ರತಿಕ್ರಿಯೆಸಿ, ನ್ಯಾಯಾಲಯಲಯದ ತೀರ್ಪನ್ನು ಎಲ್ಲರೂ ಒಪ್ಪಲೇಬೇಕು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮೂರು ಪ್ರಮುಖ ಅಂಗ ಎಂದರು. ಡಿಕೆಶಿ ಹೊರ ಬಂದ ತಕ್ಷಣ ಉಪಚುನಾವಣೆಗೆ ರಂಗು ಬಂತಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಅವರು ಇಲ್ಲದಾಗ್ಲೂ ಚುನಾವಣೆ ಮಾಡಿದ್ವಿ, ಅವರು ನೇತಾರರಾದಾಗಲೂ ಚುನಾವಣೆ ಮಾಡಿದ್ವಿ, ಈಗ ಮತ್ತೆ ಸಕ್ರೀಯ ರಾಜಕಾರಣಕ್ಕೆ ಬಂದಿದ್ದಾರೆ, ಹಾಗಂತ ನಾವು ಹೆದರಿ ಓಡಿ ಹೋಗೋದಿಲ್ಲ ಎಂದು ಹೇಳಿದರು. ಯಡಿಯೂರಪ್ಪನವರ ದಾಖಲೆ ತನ್ನ ಮನೆಯಲ್ಲಿ ಇದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರಿಗೆ ಬಿಎಸ್​ವೈ ದಾಖಲಾತಿ ಕೊಟ್ರೊ, ಅಥವಾ ಅವರು ಇವರ ಮನೆಗೆ ಬಂದು ಉಳಿದಿದ್ರೊ, ಹಾಗೆ ಆಗ್ಲಿಕ್ಕೆ ಸಾಧ್ಯವಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.

ABOUT THE AUTHOR

...view details