ಬೆಂಗಳೂರು: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಕೇಂದ್ರ, ಆಸ್ಟಿಯೊಪೊರೋಸಿಸ್ ಕ್ಲಿನಿಕ್ ಮತ್ತು ಪೀಡಿಯಾಟ್ರಿಕ್ ಡರ್ಮಟಾಲಜಿ ಕೇಂದ್ರವನ್ನು ಕೇಂದ್ರ ಸಚಿವ ಸದಾನಂದ ಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ಭಾರತವು ಔಷಧ ತಯಾರಿಕೆಗೆ ಬೇಕಾಗುವ ಎಪಿಐ ಹಾಗೂ ವೈದ್ಯಕೀಯ ಉಪಕರಣಗಳಿಗಾಗಿ ವಿದೇಶಗಳ ಮೇಲೆಯೇ ಅವಲಂಬಿತವಾಗಿದೆ. ಈ ವಲಯದಲ್ಲಿ ಸ್ವಾವಲಂಬನೆ ಗಳಿಸಲು 3 ಬಲ್ಕ್ ಡ್ರಗ್ ಪಾರ್ಕ್ & 4 ಮೆಡಿಕಲ್ ಡಿವೈಸ್ ಪಾರ್ಕ್ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳ ಮೂಲಸೌಕರ್ಯಕ್ಕಾಗಿ ಕೇಂದ್ರವು ತಲಾ 1000 ಕೋಟಿ ರೂ ವೆಚ್ಚ ಮಾಡುತ್ತಿದೆ ಎಂದರು.
ಕೇಂದ್ರ ಸರ್ಕಾರವು ದೇಶಾದ್ಯಂತ 7,000ಕ್ಕಿಂತ ಅಧಿಕ ಜನೌಷಧಿ ಕೇಂದ್ರಗಳ ಮೂಲಕ ಜನಸಾಮಾನ್ಯರಿಗೂ ಕೈಗೆಟಕುವ ಬೆಲೆಯಲ್ಲಿ ಗುಣಮುಟ್ಟದ ಔಷಧಗಳನ್ನು ಒದಗಿಸುತ್ತಿದೆ.