ಬೆಂಗಳೂರು: ಈ ಬಾರಿಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಈ ಬಾರಿಯೂ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಚಿತ್ರದುರ್ಗ ಲಿಸ್ಟ್ ಲಾಸ್ಟ್ ಆಗಿ ಹೊರ ಹೊಮ್ಮಿದೆ. ಇನ್ನು ಸಹಜ ಎಂಬಂತೆ ಹೆಣ್ಮಕ್ಕಳೇ ಸ್ಟ್ರಾಂಗ್ ಎಂಬುದನ್ನು ತೋರಿಸಿದ್ದಾರೆ. ದಾಖಲೆ ಪ್ರಮಾಣದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ನಲ್ಲಿ ಇಂದು ಬೆಳ್ಳಗೆ 11 ಗಂಟೆಗೆ ಸುದ್ಧಿಗೋಷ್ಠಿ ನಡೆಸಿದ ಇಲಾಖೆ ಕಾರ್ಯದರ್ಶಿ ಉಮಾಶಂಕರ್ ಫಲಿತಾಂಶ ಪ್ರಕಟಿಸಿದರು.. ಪಿಯು ವೆಬ್ ಸೈಟ್ www.pue.kar.nic.in , http://www.karresults.nic.in ನಲ್ಲಿ ಮಧ್ಯಾಹ್ನ 12ಗಂಟೆ ನಂತರ ಫಲಿತಾಂಶ ಲಭ್ಯವಾಗಲಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ನಂಬರ್ ಎಂಟರ್ ಮಾಡಿ ಫಲಿತಾಂಶ ನೋಡಬಹುದಾಗಿದೆ.
ಏಪ್ರಿಲ್ 16 ರಂದು ಆಯಾಯ ಕಾಲೇಜುಗಳಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಬಾರಿ ಒಟ್ಟು 6.71,653ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು. ಈ ಪೈಕಿ, 3.37,668 ಲಕ್ಷ ಬಾಲಕರು ಹಾಗೂ 3.33,985 ಲಕ್ಷ ಬಾಲಕಿಯರು ಪರೀಕ್ಷೆ ಎದುರಿಸಿದ್ದರು.
ಮಾರ್ಚ್ 1 ರಿಂದ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಕಳೆದ ವರ್ಷ ಒಟ್ಟಾರೆ ಶೇ 59.56 ಫಲಿತಾಂಶ ಬಂದಿತ್ತು, ಈ ವರ್ಷ 61.73 ನಷ್ಟು ಫಲಿತಾಂಶ, ಕಳದ ವರ್ಷಕ್ಕಿಂತ ಈ ವರ್ಷ ಫಲಿತಾಂಶ ಹೆಚ್ಚಳ.. ಶೇ. 68.24 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 55.29 ಬಾಲಕರು ಉತ್ತೀರ್ಣರಾಗಿದ್ದಾರೆ.
ಈ ಬಾರಿಯ ದ್ವಿತೀಯ ಪಿ ಯು ಫಲಿತಾಂಶ ಹೈಲೈಟ್ಸ್ :
ಉಡುಪಿ- ಪ್ರಥಮ ಸ್ಥಾನ ( 92.20)