ಕರ್ನಾಟಕ

karnataka

ETV Bharat / state

ಕೆಆರ್​​​ಪುರದಲ್ಲಿ ಜಯ ನಮ್ಮದೇ... ಕೇಂದ್ರ ಸಚಿವ ಡಿವಿಎಸ್​​ ಅಭಿಮತ - ಡಿವಿ ಸದಾನಂದಗೌಡ ಲೇಟೆಸ್ಟ್​ ನ್ಯೂಸ್

ಕೆ.ಆರ್​.ಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿ.ವಿ.ಸದಾನಂದಗೌಡ

By

Published : Nov 21, 2019, 8:11 PM IST

ಬೆಂಗಳೂರು: ‌ಕೆ.ಆರ್.ಪುರ ಉಪಸಮರ ಒನ್ ಸೈಡ್ ಚುನಾವಣೆಯಾಗಿದ್ದು, ಬಿಜೆಪಿ‌ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ದೇವಸಂದ್ರ ವಾರ್ಡ್​ನಲ್ಲಿ ಬಿಜೆಪಿ ಪರ ಮತಯಾಚನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲ ವಾತಾವರಣವಿದೆ‌. ಆದರೆ, ಕಾಂಗ್ರೆಸ್​ ಮಾತ್ರ ಬೂತ್ ಮಟ್ಟದಲ್ಲಿ‌ ಕಾರ್ಯನಿರ್ವಹಿಸಲು ಕಾರ್ಯಕರ್ತರನ್ನು ಹುಡುಕಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಎಂದಿದ್ದಾರೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ 625 ಕೋಟಿ ರೂ. ಅ‌ನುದಾನ ಘೋಷಿಸಿದೆ. ಬರುವ ದಿನಗಳಲ್ಲಿ ಈ ಕ್ಷೇತ್ರ ಇನ್ನಷ್ಟು ಅಭಿವೃದ್ದಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ABOUT THE AUTHOR

...view details