ಕರ್ನಾಟಕ

karnataka

ETV Bharat / state

ರಾಜ್ಯದ ನೆರೆ ಹಾ‌ನಿ ವರದಿ ತಿರಸ್ಕಾರವೆಂಬುದು ಕೇವಲ ಊಹಾಪೋಹ : ಸದಾನಂದಗೌಡ - ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸ

ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರುವ ನೆರೆಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ ಎನ್ನುವುದು ಕೇವಲ ಊಹಾಪೋಹ ಮಾತ್ರ,ವಿಜಯದಶಮಿ ಬಳಿಕ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ ಸದಾನಂದಗೌಡ

By

Published : Oct 4, 2019, 5:37 PM IST

ಬೆಂಗಳೂರು:ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರುವ ನೆರೆಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ ಎನ್ನುವುದು ಕೇವಲ ಊಹಾಪೋಹ ಮಾತ್ರ, ವಿಜಯದಶಮಿ ಬಳಿಕ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾತನಾಡಿದ್ದಾರೆ
ಸಂಜಯನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ವರದಿ ತಿರಸ್ಕಾರ ಎಂಬುದು ಕೇವಲ ಊಹಾಪೋಹ, ವರದಿಯನ್ನು ಯಾರಾದರೂ ನೋಡಿದ್ದಾರಾ? ಈ ರೀತಿಯಿಂದಾಗಿಯೇ ಗೊಂದಲ ಸೃಷ್ಟಿಯಾಗುವುದು.35,618 ಕೋಟಿ ರೂ. ನಷ್ಟದ ವರದಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. ಕೇಂದ್ರದವರು ಒಂದು ಸರ್ವೇ ಮಾಡಿದ್ದಾರೆ, ಆದರೆ ಅವರು ಎಷ್ಟು ಲೆಕ್ಕಾಚಾರ ಹಾಕಿದ್ದಾರೆ ಅಂತಾ ನನಗೆ ಗೊತ್ತಿಲ್ಲ‌.ಪುನರ್ವಸತಿ ಕಾರ್ಯ ಮಳೆ ನಿಂತ ಮೇಲೆ ಆಗಬೇಕಾಗಿರುವ ಕಾರಣ ಹಣ ದುರುಪಯೋಗ ಆಗುವುದು ಬೇಡ ಎಂದು ಬಿಡುಗಡೆ ಮಾಡಿಲ್ಲ ಎಂದಿದ್ದು, ಈವರೆಗೆ ಯಾರಿಗೂ ಯಾಕೆ ನೆರವು ಕೊಟ್ಟಿಲ್ಲ ಎಂಬುದನ್ನು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವಿಳಂಬಕ್ಕೆ ಕಾರಣ ನೀಡಿದರು. ನಿನ್ನೆ ಮಧ್ಯಾಹ್ನ ರಾಜ್ಯದ ಕಂದಾಯ ಇಲಾಖೆಯ ಅಧಿಕಾರಿಗಳು ಗೃಹ ಸಚಿವರ ಜೊತೆ ಚರ್ಚಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಕೂಡಾ ನಾವು ರಾತ್ರಿ ಅಮಿತ್ ಶಾ ಭೇಟಿ ಮಾಡಿದ್ದೇವೆ. ಎಲ್ಲವನ್ನೂ ಅವರಲ್ಲಿ ವಿಷಾದವಾಗಿ ಹೇಳಿದ್ದೇವೆ . ನೆರೆ ಪರಿಹಾರ ಗಿಂತ ಚರ್ಚೆಯ ರಿಲೀಫ್ ಮೊದಲು ಆಗಬೇಕಿದೆ ಎಂದು ಹೇಳಿದ್ದೇವೆ‌. ಯಾಕೆಂದರೆ ಇದನ್ನೇ ಸುದ್ದಿಯಾಗಿ ಮಾಡುತ್ತಿರುವುದನ್ನು ನೋಡಿದ್ದೇವೆ. ಅದಕ್ಕಾಗಿ ನಾವು ಅವರಲ್ಲಿ ಎಲ್ಲವನ್ನೂ ಹೇಳಿದ್ದೇವೆ ಎಂದರು. ಅಲ್ಲದೇ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.ಇನ್ಮುಂದೆ ನೋ ಕಮೆಂಟ್ಸ್:ಇನ್ನು ಯಾರ ಹೇಳಿಕೆಗಳಿಗೂ ನಾನು ಪ್ರತಿಕ್ರಿಯೆ ಕೊಡಲ್ಲ. ನಾನೊಬ್ಬ ಜವಾಬ್ದಾರಿಯುತ ಮಂತ್ರಿ . ಕೇಂದ್ರದಿಂದ ಇಲ್ಲಿಗೆ ಬರುವ ಅನುದಾನ ತರುವುದು ನನ್ನ ಕೆಲಸ. ಮಾತಾಡುವವರು ಮಾತಾಡುತ್ತಲೇ ಇರಲಿ ಕೆಲಸ ಮಾಡುವವರು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಚರ್ಚೆಗೆ ವಿರಾಮ ಹಾಡಿದರು.

ABOUT THE AUTHOR

...view details