ಕರ್ನಾಟಕ

karnataka

ETV Bharat / state

ಜನೌಷಧಿ ಲಭ್ಯತೆ ಖಚಿತಪಡಿಸಿಕೊಳ್ಳಲು ಕ್ರಿಯಾಯೋಜನೆ ರೂಪಿಸಿ: ಡಿ.ವಿ ಸದಾನಂದಗೌಡ ಸೂಚನೆ - Sadananda Gowda held A comprehensive review meeting at Delhi

ಸಚಿವ ಡಿ.ವಿ.ಸದಾನಂದ ಗೌಡ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ)ಯ ಸಮಗ್ರ ಪರಿಶೀಲನಾ ಸಭೆ ನಡೆಸಿದರು.ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ಜನರಿಗೆ ಕಡಿಮೆ ದರದಲ್ಲಿ ಮುಖಗವಸುಗಳು, ಔಷಧಿಗಳು ಮತ್ತು ಇತರ ಉತ್ಪನ್ನಗಳ ಸರಬರಾಜನ್ನು ಖಾತ್ರಿಪಡಿಸಿದ್ದಕ್ಕಾಗಿ ಸಭೆಯಲ್ಲಿ ಸಚಿವ ಸದಾನಂದಗೌಡ ಬಿಪಿಪಿಐ ತಂಡವನ್ನು ಅಭಿನಂದಿಸಿದರು.

ಭಾರತೀಯ ಜನೌಷಧಿ ಪರಿಯೋಜನೆ ಸಮಗ್ರ ಪರಿಶೀಲನಾ ಸಭೆ
ಭಾರತೀಯ ಜನೌಷಧಿ ಪರಿಯೋಜನೆ ಸಮಗ್ರ ಪರಿಶೀಲನಾ ಸಭೆ

By

Published : Nov 3, 2020, 9:15 PM IST

ಬೆಂಗಳೂರು:ಪ್ರತಿ ಜನೌಷಧಿ ಅಂಗಡಿಯಲ್ಲೂ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು.ಈ ಗುರಿಯನ್ನು ಸಾಧಿಸಲು ವಿವರವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಬಿಪಿಪಿಐಗೆ ಸೂಚಿಸಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ)ಯ ಸಮಗ್ರ ಪರಿಶೀಲನಾ ಸಭೆ ನಡೆಸಿದರು.

ಭಾರತೀಯ ಜನೌಷಧಿ ಪರಿಯೋಜನೆ ಸಮಗ್ರ ಪರಿಶೀಲನಾ ಸಭೆ

ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ (ಅಕ್ಟೋಬರ್ 31 ರವರೆಗೆ) 6600 ಜನೌಷಧಿ ಮಳಿಗೆಗಳ ಮೂಲಕ 358 ಕೋಟಿ ರೂ. 2019 ರ ಹಣಕಾಸು ವರ್ಷದಲ್ಲಿ 433 ಕೋಟಿ ರೂ. ಮಾರಾಟ) ಮೌಲ್ಯದ ಫಾರ್ಮಾ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ. ಇಡೀ ಹಣಕಾಸು ವರ್ಷದಲ್ಲಿ 600 ಕೋಟಿ ರೂ.ಗೂ ಹೆಚ್ಚು ಮಾರಾಟ ನಡೆಯುವ ಸಾಧ್ಯತೆಯಿದೆ.

ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಮುಖಗವಸುಗಳು, ಔಷಧಿಗಳು ಮತ್ತು ಇತರ ಉತ್ಪನ್ನಗಳ ಸರಬರಾಜನ್ನು ಖಾತ್ರಿಪಡಿಸಿದ್ದಕ್ಕಾಗಿ ಸಭೆಯಲ್ಲಿ ಸಚಿವ ಸದಾನಂದಗೌಡ ಬಿಪಿಪಿಐ ತಂಡವನ್ನು ಅಭಿನಂದಿಸಿದರು.ಔಷಧಿಗಳಿಗಾಗಿ ಜನರ, ವಿಶೇಷವಾಗಿ ಬಡಜನರ ಖರ್ಚನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನವು ಅಂತಿಮವಾಗಿ ರೂಪುಪಡೆಯುತ್ತಿದೆ. ನವೀನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೂರೈಕೆ ಸರಪಳಿಗಳನ್ನು ಬಲಪಡಿಸಿ ಈ ಪ್ರಯೋಜನಗಳನ್ನು ಕ್ರೂಢೀಕರಿಸಲು ಬಿಪಿಪಿಐಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ಜನೌಷಧಿ ಪರಿಯೋಜನೆ ಸಮಗ್ರ ಪರಿಶೀಲನಾ ಸಭೆ

ಜನೌಷಧಿಯ ಔಷಧಗಳ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ದೂರದ ಮತ್ತು ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಇವುಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು ಮತ್ತು ಪ್ರತಿ ಜನೌಷಧಿ ಅಂಗಡಿಯಲ್ಲೂ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ABOUT THE AUTHOR

...view details