ಕರ್ನಾಟಕ

karnataka

ETV Bharat / state

ಚೆಕ್​ಗಳ ಮೇಲೆ ನಕಲು ಸಹಿ ಪ್ರಕರಣ: ಆರೋಪಿಗೆ ನಾಲ್ಕು ವರ್ಷ ಜೈಲು - ಸಾರ್ವಜನಿಕ ಅಭಿಯೋಜಕ ನ್ಯಾಯಾಲಯ

ಜಿಲ್ಲಾ ಹೋಮ್ ಗಾರ್ಡ್ಸ್ ಕಚೇರಿಯಲ್ಲಿ ಆರೋಪಿ ಶಿವಪ್ರಸಾದ್​ ​​ಎಫ್​ಡಿಐ ನೌಕರನಾಗಿ ಕೆಲಸ ಮಾಡುತ್ತಿದ್ದರು. ಕಚೇರಿಯ ಕಮಾಂಡೆಂಟ್ ಅವರ ಸಹಿಯನ್ನು ನಕಲು ಮಾಡಿ ಸುಮಾರು 25 ಲಕ್ಷ ರೂ. ಹೆಚ್ಚು ಹಣ ಡ್ರಾ ಮಾಡಿಕೊಂಡು ವಂಚನೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆ ಆರೋಪಿಗೆ ಸಾರ್ವಜನಿಕ ಅಭಿಯೋಜಕ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಕೋರ್ಟ್​

By

Published : Oct 3, 2019, 8:22 PM IST

ಬೆಂಗಳೂರು:ಜಿಲ್ಲಾ ಹೋಮ್ ಗಾರ್ಡ್ಸ್ ಕಚೇರಿಯಲ್ಲಿ ಆರೋಪಿ ಶಿವಪ್ರಸಾದ್​ ​​ಎಫ್​ಡಿಐ ನೌಕರನಾಗಿ ಕೆಲಸ ಮಾಡುತ್ತಿದ್ದರು. ಕಚೇರಿಯ ಕಮಾಂಡೆಂಟ್ ಅವರ ಸಹಿಯನ್ನು ನಕಲು ಮಾಡಿ ಸುಮಾರು 25 ಲಕ್ಷ ರೂ. ಹೆಚ್ಚು ಹಣ ಡ್ರಾ ಮಾಡಿಕೊಂಡು ವಂಚನೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆ ಆರೋಪಿಗೆ ಸಾರ್ವಜನಿಕ ಅಭಿಯೋಜಕ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಸಿಐಡಿ ಘಟಕ ಪ್ರಕರಣದ ತನಿಖೆ ನಡೆಸಿ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಶಿವಪ್ರಸಾದ್‌ಗೆ 4 ವರ್ಷ ಕಾರಾಗೃಹ ಶಿಕ್ಷೆ ಮತ್ತು 24,15,000 ರೂ.ಗಳ ದಂಡ ವಿಧಿಸಿ ಆದೇಶಿಸಿದೆ.

ದಂಡದ ಮೊತ್ತ ಕಟ್ಟದೆ ಇದ್ದರೆ 6 ತಿಂಗಳ ಕಾರಾಗೃಹ ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದೆ. ಈ ಪ್ರಕರಣದಲ್ಲಿ ಸಿಐಡಿ ಡಿವೈಎಸ್‌ಪಿ ಕೆ. ಪುರುಷೋತ್ತಮ್ ಮತ್ತು ಇನ್‌ಸ್ಪೆಕ್ಟರ್ ಮೊಹಮ್ಮದ್ ಅಲಿ ಅವರನ್ನೊಳಗೊಂಡ ತಂಡ ತನಿಖೆ ನಡೆಸಿತ್ತು.

ABOUT THE AUTHOR

...view details