ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಜೋರಾದ ಡ್ರಗ್ಸ್​ ಘಾಟು: ನಕಲಿ ಗುಟ್ಕಾ ವಶಕ್ಕೆ ಪಡೆದ ಸಿಸಿಬಿ - ಕೆಆರ್ ಮಾರ್ಕೆಟ್​ನಲ್ಲಿ ನಕಲಿ ಗುಟ್ಕಾ ದಂಧೆ

ಕೆ.ಆರ್ ಮಾರ್ಕೆಟ್​ನಲ್ಲಿ ನಕಲಿ ಗುಟ್ಕಾ ದಂಧೆ ಜೋರಾಗಿದ್ದು, ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿ ಮೂಟೆ ಮೂಟೆ ನಕಲಿ ಗುಟ್ಕಾ ಜಪ್ತಿ ಮಾಡಿದ್ದಾರೆ. ಜೊತೆಗೆ ನೆಲಮಂಗಲ ರಸ್ತೆಯಲ್ಲಿನ ಗೋಡೌನ್ ಮೇಲೆ ಸಹ ದಾಳಿ ಮಾಡಲಾಗಿದೆ.

duplicate Gutka case of bangalore; investigation is going on
ಬೆಂಗಳೂರಿನಲ್ಲಿ ಜೋರಾದ ಡ್ರಗ್ಸ್​ ಘಾಟು; ನಕಲಿ ಗುಟ್ಕಾ ವಶಕ್ಕೆ ಪಡೆದ ಸಿಸಿಬಿ ನಾರ್ಕೋಟಿಕ್ಸ್

By

Published : Sep 9, 2020, 10:37 AM IST

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್​​ ಮಾಫಿಯಾ ತನಿಖೆ ಜೋರಾದ ಬೆನ್ನಲ್ಲೇ ತಡರಾತ್ರಿ ಸಿಸಿಬಿ ನಾರ್ಕೋಟಿಕ್ಸ್ ಭರ್ಜರಿ ಬೇಟೆಯಾಡಿದೆ.

ನಕಲಿ ಗುಟ್ಕಾ ವಶಕ್ಕೆ ಪಡೆದ ಸಿಸಿಬಿ

ಕೆ.ಆರ್ ಮಾರ್ಕೆಟ್​ನಲ್ಲಿ ನಕಲಿ ಗುಟ್ಕಾ ದಂಧೆ ಜೋರಾಗಿದ್ದು, ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿ ಮೂಟೆ ಮೂಟೆ ನಕಲಿ ಗುಟ್ಕಾ ಜಪ್ತಿ ಮಾಡಿದೆ. ದಾಳಿ ವೇಳೆ‌ 200 ಮೂಟೆ ನಕಲಿ ಗುಟ್ಕಾ, 3 ಲಾರಿಗಳನ್ನು ಸೀಜ್ ಮಾಡಿ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಮತ್ತೊಂದಡೆ ನೆಲಮಂಗಲ ರಸ್ತೆಯಲ್ಲಿನ ಗೋಡೌನ್ ಮೇಲೆ ದಾಳಿ ಮಾಡಿದ ಸಿಸಿಬಿ ನಾರ್ಕೋಟಿಕ್ಸ್, ಡ್ರಗ್ಸ್​ ಜಪ್ತಿ ಮಾಡಿದೆ.

ದಾಳಿ ವಿಚಾರ ತಿಳಿಯುತ್ತಿದ್ದಂತೆ ಕೆಲವರು ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details