ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತು ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ನಡುವಿನ ಹಳೆ ಗಲಾಟೆ ಕೇಸ್ ಮತ್ತೆ ರೀ ಓಪನ್ ಆಗಿದೆ. ಪಾನಿಪುರಿ ಕಿಟ್ಟಿ ಮೇಲೆ ಹೊಸದಾಗಿ ಹೈಗ್ರೌಂಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಜಯ್ ಕೋರ್ಟ್ ಮುಖಾಂತರ ಕೇಸ್ ರೀ ಓಪನ್ ಮಾಡಿಸಿದ್ದಾರೆ.
ಏನಿದು ಘಟನೆ...?: 2018ರಲ್ಲಿ ಪಾನಿಪುರಿ ಕಿಟ್ಟಿ ಮತ್ತು ದುನಿಯಾ ವಿಜಯ್ ಕಾರ್ಯಕ್ರಮವೊಂದರಲ್ಲಿ ಕೈ ಕೈ ಮಿಲಾಯಿಸಿಕೊಂಡಿದ್ದರು. ವಸಂತನಗರ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಬಾಡಿ ಬಿಲ್ಡ್ ಸ್ಪರ್ಧೆಯಲ್ಲಿ ಪಾನಿಪುರಿ ಕಿಟ್ಟಿ ಟೀಂ ಮತ್ತು ದುನಿಯಾ ವಿಜಯ್ ಟೀಂಗೂ ಗಲಾಟೆ ನಡೆದಿತ್ತು.
ಆ ದಿನ ಗಲಾಟೆ ನಡೆದ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಾನಿಪುರಿ ಕಿಟ್ಟಿ ಸಹೋದರ ಮಾರುತಿ ಗೌಡ ಅವರನ್ನು ಕಾರಲ್ಲಿ ಕರೆದೊಯ್ದಿದ್ದ ನಟ ವಿಜಯ್ ಹಿಗ್ಗಾಮುಗ್ಗ ಥಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.