ಕರ್ನಾಟಕ

karnataka

ETV Bharat / state

ಬೆಂಗಳೂರು ಸೆಂಟ್ರಲ್ ಕಾಲೇಜ್ ಕ್ಯಾಂಪಸ್​ನಲ್ಲಿ 'ಸಲಗ'...! - ಸಲಗ ಚಿತ್ರ

ದುನಿಯಾ ವಿಜಯ್ ಆ್ಯಕ್ಟಿಂಗ್ ಮತ್ತು ಮೊದಲ ಬಾರಿಗೆ ಡೈರೆಕ್ಷನ್ ಇರುವ ಸಲಗ ಚಿತ್ರ, ಅಂಡರ್ ವರ್ಲ್ಡ್ ಕಥೆ ಆಧರಿಸಿರೋ ಹಿನ್ನೆಲೆಯಿಂದಾಗಿ ಹಳೆ ಇತಿಹಾಸ ಇರುವ ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ಯಾಂಪಸ್​ನಲ್ಲಿ ಭರದಿಂದ ಶೂಟಿಂಗ್ ಮಾಡ್ತಾ ಇದೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ನಲ್ಲಿ ದುನಿಯಾ ವಿಜಯ್

By

Published : Aug 13, 2019, 7:52 AM IST

ಬೆಂಗಳೂರು: ದುನಿಯಾ ವಿಜಯ್ ನಟನೆ ಜೊತೆಗೆ ಫಸ್ಟ್ ಟೈಮ್ ಡೈರೆಕ್ಷನ್ ಕ್ಯಾಪ್ ತೊಟ್ಟಿರುವಚಿತ್ರಸಲಗ. ಈ ಚಿತ್ರ ಭೂಗತ ಲೋಕದ ಕಥೆ ಆಧರಿಸಿರುವ ಹಿನ್ನೆಲೆಯಿಂದಾಗಿ ಶೂಟಿಂಗ್​ ಭರದಿಂದ ಸಾಗಿದೆ.

ಸದ್ಯ 40 ದಿನ ಚಿತ್ರೀಕರಣ ಮಾಡ್ತಾ ಇರೋ ಸಲಗ ಚಿತ್ರತಂಡ, ಹಳೆ ಇತಿಹಾಸ ಇರುವ ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ಯಾಂಪಸ್​ನಲ್ಲಿ ಟೆಂಟ್​ ಹಾಕಿದೆ.

ಬೆಂಗಳೂರು ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ನಲ್ಲಿ ಸಲಗ ಚಿತ್ರದ ಶೂಟಿಂಗ್​

ಕಾಲೇಜ್ ಎಪಿಸೋಡ್​ಗಳನ್ನ, ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಕ್ಯಾಂಪಸ್​ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಡಾಲಿ ಧನಂಜಯ್ ಸಲಗ ಅಡ್ಡಕ್ಕೆ ಎಂಟ್ರಿಯಾಗಿದ್ದಾರೆ. ಇದರ ಜೊತೆಗೆ ಕಾಕ್ರೋಚ್ ಸುಧಿ, ಸಂಜನಾ ಆನಂದ್ ಕೂಡ ಸಲಗ ಟೀಂನಲ್ಲಿ ಒಬ್ಬರಾಗಿದ್ದಾರೆ. ಇನ್ನು ಟಗರು ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರು ಸಲಗ ಚಿತ್ರಕ್ಕೆ ಸೇರ್ಪಡೆಯಾಗಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದಿದೆ.

ಈ ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು, ಚರಣ್ ರಾಜ್ ಹಾಗೂ ನವೀನ್ ಸಜ್ಜು ಸಂಗೀತವಿರಲಿದೆ. ಟಗರು ಸಿನಿಮಾ ನಿರ್ಮಿಸಿದ್ದ ಕೆ.ಪಿ ಶ್ರೀಕಾಂತ್ ಸಲಗಕ್ಕೂ ಬಂಡವಾಳ ಹೂಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಲಗ ಬಿಡುಗಡೆ ಆಗುವ ಸಾಧ್ಯತೆಯಿದೆ.

ABOUT THE AUTHOR

...view details