ದೊಡ್ಡಬಳ್ಳಾಪುರ: ತಾಲೂಕಿನ ಸುತ್ತಮುತ್ತ ಭಾನುವಾರ ರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಬಿರುಗಾಳಿಯೊಂದಿಗೆ ಆರ್ಭಟಿಸಿದ ಮಳೆ ತಾಲೂಕಿನ ಮರಳೇನ ಹಳ್ಳಿಯ ಹಲವು ಬಾಳೆ ತೋಟಗಳನ್ನು ನೆಲಸಮ ಮಾಡಿದೆ.
ಮುತ್ತುರಾಜ್ ಎಂಬುವರು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ತೋಟ ಸಂಪೂರ್ಣವಾಗಿ ನಾಶವಾಗಿದೆ. ಶೇಕಡಾ.90ರಷ್ಟು ಗಿಡಗಳಲ್ಲಿ ಗೊನೆಗಳು ಬಂದಿದ್ದು, ಒಂದೆರಡು ತಿಂಗಳಲ್ಲಿ ಬಾಳೆ ಫಸಲು ಕೊಯ್ಲಿಗೆ ಬರುತ್ತಿತ್ತು. ಸುಮಾರು 3 ಲಕ್ಷ ರೂಪಾಯಿ ಬಂಡವಾಳ ಹಾಕಿ ಬಾಳೆ ಬೆಳೆಯಲಾಗಿತ್ತು. ಆದರೆ ಭಾನುವಾರ ಸಂಜೆ ಬಂದ ಬಿರುಗಾಳಿ ಮಳೆಗೆ ಸಂಪೂರ್ಣವಾಗಿ ಬಾಳೆ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.