ಬೆಂಗಳೂರು:ಡಿವೈಎಸ್ಪಿ ಲಕ್ಷ್ಮಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಲಕ್ಷ್ಮಿ ಅವರ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡ ಆರೋಪಿಗಳ ಪೈಕಿ ಮನೋಹರ್ ಎಂಬಾತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರಿಗೂ ಒಳಪಡಿಸಿದ್ದಾರೆ. ಲಕ್ಷ್ಮಿ ಹಾಗು ಪತಿ ನವೀನ್ ಹೇಗಿದ್ದರು?, ಯಾವಾಗಿನಿಂದ ಬೇರೆಯಾಗಿದ್ದರು?, ಯಾವ ಕಾರಣಕ್ಕೆ ಬೇರೆಯಾಗಿದ್ದರು? ಎಂಬುದರ ಬಗೆಗೆಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ.