ಬೆಂಗಳೂರು: ಗೃಹ ಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ಯುವತಿಯೊಬ್ಬರ ಕೊಲೆ ನಡೆದಿದೆ ಎಂದರೆ ರಾಜ್ಯಕ್ಕೆ ಸುಭದ್ರತೆ, ಕಾನೂನು ಸುವ್ಯವಸ್ಥೆ ಕೊಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೈಸೂರು ನಗರ ಶಾಂತಿಯುತವಾದ ಸ್ಥಳ ಪ್ರವಾಸಿಗರ ತಾಣವಾಗಿದೆ. ಇಂಥ ಸ್ಥಳದಲ್ಲಿ ನಾಲ್ಕು ದಿನದ ಹಿಂದೆ ಒಂದು ಶೂಟೌಟ್ ನಡೆದಿದೆ, ನಂತರ ಒಂದು ಗ್ಯಾಂಗ್ ರೇಪ್ ಕೂಡ ನಡೆದಿದೆ. ಪೊಲೀಸ್ ಇಲಾಖೆ ಇಲ್ಲಿಯ ತನಕ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಇತ್ತ ಸರ್ಕಾರ ಕಣ್ಮುಚ್ಚಿ ಕೂತಿದೆ. ಆದರೆ ಈ ಕಡೆ ಗೃಹ ಸಚಿವ ಬೇಜವಾಬ್ದಾರಿತನದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.