ಕರ್ನಾಟಕ

karnataka

ETV Bharat / state

ಕಂಠ ಪೂರ್ತಿ ಕುಡಿದು ತರಕಾರಿ ಗಾಡಿಗಳಿಗೆ ಡಿಕ್ಕಿ: ಅಪಘಾತವಾಗ್ತಿದ್ದಂತೆ ಚಾಲಕ ಎಸ್ಕೇಪ್ - ಕುಡಿದು ಕಾರು ಚಲಾವಣೆ

ಬೆಂಗಳೂರಿನ ವಿದ್ಯಾರಣ್ಯಪುರ ಸಂಭ್ರಮ ಕಾಲೇಜು ಬಳಿ ಕಂಠ ಪೂರ್ತಿ ಕುಡಿದ ಕಾರಿನ ಚಾಲಕನೋರ್ವ ಮುಂದೆ ಬರುತ್ತಿದ್ದ ತರಕಾರಿ ಗಾಡಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

Drunk Car driver collide vegetable vehicles
ಕಂಠ ಪೂರ್ತಿ ಕುಡಿದು ತರಕಾರಿ ಗಾಡಿಗಳಿಗೆ ಡಿಕ್ಕಿ

By

Published : Sep 2, 2021, 4:44 PM IST

ಬೆಂಗಳೂರು:ಕುಡಿದ ಅಮಲಿನಲ್ಲಿ ವಾಹನ ಚಾಲಕನೋರ್ವ ಮೂರು ತರಕಾರಿ ಗಾಡಿಗಳಿಗೆ ಗುದ್ದಿದ ಘಟನೆ ನಗರದ ವಿದ್ಯಾರಣ್ಯಪುರದ ಸಂಭ್ರಮ ಕಾಲೇಜು ಬಳಿ ನಡೆದಿದೆ.

ತರಕಾರಿ ಗಾಡಿಗಳಿಗೆ ಡಿಕ್ಕಿ ಹೊಡೆದ ಕಾರು

ವಾಹನ ಚಾಲಕ ಕಂಠಪೂರ್ತಿ ಮದ್ಯ ಕುಡಿದು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿದ್ದನು. ಈ ವೇಳೆ ಎದುರಿಗೆ ಬರುತ್ತಿದ್ದ ತರಕಾರಿ ಗಾಡಿಗಳಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ಘಟನೆ ಬಳಿಕ ವಾಹನ ಚಾಲಕ ಪರಾರಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ಜಾಲಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: ವೀರಶೈವ-ಲಿಂಗಾಯತ ಒಂದೇ ಧರ್ಮವಾಗಿ ಉಳಿಬೇಕು: ಸಚಿವ ಮುರುಗೇಶ್ ನಿರಾಣಿ

ABOUT THE AUTHOR

...view details