ಕರ್ನಾಟಕ

karnataka

ETV Bharat / state

ಡ್ರಗ್ಸ್​​ ಮಾಫಿಯಾ: ಕಿಂಗ್​ಪಿನ್​ ಬಂಧನ ಬೆನ್ನಲ್ಲೇ ಮಿಂಚಿನ ಕಾರ್ಯಾಚರಣೆಗೆ ಎನ್​ಸಿಬಿ ಸಜ್ಜು - ಬೆಂಗಳೂರು ಸುದ್ದಿ

ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಅಪಾರ ಪ್ರಮಾಣದ ಮಾದಕ ಪದಾರ್ಥವನ್ನ ಡ್ರಗ್ಸ್ ದಂಧೆ ಡೀಲರ್​​ ಅನಿಕಾಳಿಂದ ಜಪ್ತಿ ಮಾಡಿದ್ದಲ್ಲದೇ, ಸ್ಯಾಂಡಲ್‌ವುಡ್‌ ನಲ್ಲಿ ಮಾದಕ ಜಾಲ ಹರಡಿರುವ ಬಗ್ಗೆ ಮಾಹಿತಿ ನೀಡಿದ್ದ ಎನ್.ಸಿ.ಬಿ ಅಧಿಕಾರಿಗಳ ತಂಡ ಸದ್ಯ ದೆಹಲಿ ಹಾಗೂ ಮುಂಬೈ, ಕರ್ನಾಟಕದಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಸ್ಯಾಂಡಲ್‌ವುಡ್‌ ಗೆ ಮಾದಕ ಲೋಕದ ನಂಟು
ಸ್ಯಾಂಡಲ್‌ವುಡ್‌ ಗೆ ಮಾದಕ ಲೋಕದ ನಂಟು

By

Published : Sep 2, 2020, 10:03 AM IST

ಬೆಂಗಳೂರು: ನಗರದಲ್ಲಿ ಮಾದಕ‌ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿ ಸ್ಯಾಂಡಲ್‌ವುಡ್‌ ಗೂ ಶಾಕ್ ನೀಡಿದ್ದ ಎನ್.ಸಿ.ಬಿ ಅಧಿಕಾರಿಗಳ ತಂಡ ಸದ್ಯ ಕರ್ನಾಟಕ ಸೇರಿ ದೇಶಾದ್ಯಂತ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸದ್ಯ ಈಗಾಗಲೇ ಏಳು ಜನರನ್ನ ಖೆಡ್ಡಾಕ್ಕೆ ಕೆಡವಿದ್ದು ಈ ಆರೋಪಿಗಳ ಜೊತೆ ನಂಟು ಹೊಂದಿದ ಇನ್ನಿತರರ ಬಂಧನಕ್ಕೆ ಶೋಧ ಮುಂದುವರೆದಿದೆ.

ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಅಪಾರ ಪ್ರಮಾಣದ ಮಾದಕ ಪದಾರ್ಥವನ್ನ ಡ್ರಗ್ಸ್​ ದಂಧೆಯ ಡೀಲರ್​ ಅನಿಕಾಳಿಂದ ಜಪ್ತಿ ಮಾಡಿದ್ದಲ್ಲದೇ, ಸ್ಯಾಂಡಲ್‌ವುಡ್‌ ನಲ್ಲಿ ಮಾದಕ ಜಾಲ ಹರಡಿರುವ ಬಗ್ಗೆ ಮಾಹಿತಿ ನೀಡಿದ್ದ ಎನ್.ಸಿ.ಬಿ ಅಧಿಕಾರಿಗಳ ತಂಡ ಸದ್ಯ ದೆಹಲಿ ಹಾಗೂ ಮುಂಬೈ, ಕರ್ನಾಟಕದಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ಸ್ಯಾಂಡಲ್‌ವುಡ್‌ ಗೆ ಮಾದಕ ಲೋಕದ ನಂಟು

ಎನ್.ಸಿ.ಬಿಯ‌ ಈ ಕಾರ್ಯಾಚರಣೆ ವೇಳೆ ಬೆಂಗಳೂರಿನ ಪೇಜ್ ತ್ರೀ ಸೆಲೆಬ್ರಿಟಿಗಳಿಗೆ ಅಂತಾರಾಷ್ಟ್ರೀಯ ಜಾಲದಿಂದ ಮರಿಜುವಾನಾ ಡ್ರಗ್ಸ್​ ಸರಬರಾಜು ಮಾಡಲಾಗ್ತಿದೆ. ಗೋವಾ ಮೂಲದ ಕಿಂಗ್ ಪಿನ್ ಫಯಾಜ್ ಅಹ್ಮದ್ ನಿನ್ನೆ ಬಲೆಗೆ ಬಿದ್ದಿದ್ದಾನೆ. ಗೋವಾದ ಖಾಸಗಿ ರೆಸಾರ್ಟ್ಸ್ ಒಂದರಲ್ಲಿ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಹ್ಮದ್ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುವವರಲ್ಲಿ ‌ಪ್ರಮುಖನಾಗಿ ಗುರುತಿಸಿಕೊಂಡಿದ್ದ. ಮುಂಬೈನ ವಿದೇಶಿ ಪೋಸ್ಟ್ ಆಫೀಸ್ ಗೆ ಬಂದಿದ್ದ 3.5 ಕೆ.ಜಿ ಕ್ಯುರೇಟೆಡ್ ಗಾಂಜಾ ಡ್ರಗ್ಸ್​​ಅನ್ನು ಎನ್.ಸಿ.ಬಿ ವಶಕ್ಕೆ ‌ಪಡೆದಿದೆ.

ಅಫ್ಘಾನಿಸ್ತಾನ, ಕೆನಡಾ, ಯುಎಸ್ಎ, ಕೊಲಂಬಿಯಾ, ಜಮೈಕಾ, ಮೊರಾಕ್ಕೋ, ಪರಾಗ್ವೆ, ನೆದರ್ಲೆಂಡ್ಸ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅವ್ಯಾಹತವಾಗಿ ಬಳಕೆಯಲ್ಲಿರುವ ಗಾಂಜಾಗೆ ಮುಂಬೈ ಹಾಗೂ ದೆಹಲಿ‌ ಮಾರುಕಟ್ಟೆಯಲ್ಲಿ 1 ಗ್ರಾಂಗೆ ಬರೋಬ್ಬರಿ 5 ಸಾವಿರ ರೂ. ಡಿಮ್ಯಾಂಡ್ ಇದೆ. ಮುಂಬೈನಲ್ಲಿ ವಶಪಡಿಸಿಕೊಂಡ ಗಾಂಜಾ ಕೆನಾಡಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಗೋವಾಗೆ ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು.

ವೆಬ್​ಸೈಟ್​ವೊಂದರ ಮೂಲಕ ಖರೀದಿಯಾಗುತ್ತಿದ್ದ ಭಾರೀ ಪ್ರಮಾಣದ ಗಾಂಜಾಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣದ ವಹಿವಾಟು ನಡೆಯುತ್ತಿತ್ತು. ಸದ್ಯ ಮುಂಬೈ, ದೆಹಲಿ, ಗೋವಾ ವಿಳಾಸಗಳಿಗೆ ಆನ್​ಲೈನ್​ ಮೂಲಕ ಆರ್ಡರ್ ಪ್ಲೇಸ್ ಮಾಡಿದ್ರೆ, ಆಟಿಕೆಗಳು, ಟಿನ್ ಗಳಲ್ಲಿ ಹುದುಗಿಸಿಟ್ಟ ಗಾಂಜಾ ಭಾರತಕ್ಕೆ ಸಲೀಸಾಗಿ ಆಮದಾಗುತ್ತಿತ್ತು ಅನ್ನೋ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ವಿದೇಶಿ ಪೋಸ್ಟ್ ಆಫೀಸ್ ಗಳಿಗೆ ಬಂದು ತಲುಪುತ್ತಿದ್ದ ಡ್ರಗ್ಸ್ ನಂತರ ಬೇಡಿಕೆ ಆಧಾರದಲ್ಲಿ ಬೆಂಗಳೂರು, ಗೋವಾ ಸೇರಿದಂತೆ ಇನ್ನಿತರ ನಗರಗಳಿಗೆ ಸರಬರಾಜಾಗುತ್ತಿತ್ತು. ಬೆಂಗಳೂರಿಗೆ ವ್ಯವಸ್ಥಿತವಾಗಿ ಗಾಂಜಾ ಸರಬರಾಜು‌ ಕೆಲಸ ನೋಡಿಕೊಳ್ಳುತ್ತಿದ್ದವನು ನಿನ್ನೆ ಬಂಧಿತನಾದ ಈ ಫಯಾಜ್ ಅಹ್ಮದ್. ಹೀಗಾಗಿ ಈತನ ಜೊತೆ ಲಿಂಕ್ ಹೊಂದಿರುವ ಪೆಡ್ಲರ್ ಗೆ ಶೋಧ ಕಾರ್ಯ ಮುಂದುವರೆದಿದೆ.

ಬೆಂಗಳೂರಿನಲ್ಲಿ‌ ನಡೆದ ಕಾರ್ಯಾಚರಣೆ ಬಳಿಕ ಸ್ಯಾಂಡಲ್‌ವುಡ್‌ ಮಾದಕ‌ಲೋಕದ ಮೇಲೆ ಮೊದಲಿನಿಂದಲೂ ಕಣ್ಣಿಡಲಾಗಿದೆ ಎಂದು ಎಚ್ಚರಿಕೆ ನೀಡಿದ್ದ ಎನ್.ಸಿ.ಬಿ, ಸದ್ಯ ಗಾಂಜಾ ಗೀಳಿಗೆ ಬಿದ್ದ ಸ್ಯಾಂಡಲ್‌ವುಡ್ ನ ‌ನಟ ನಟಿಯರು, ಉದ್ಯಮಿಗಳಿಗೆ ಮತ್ತು ಶ್ರೀಮಂತರಿಗೆ ನಿಜವಾದ ನಡುಕ ಈಗ ಶುರುವಾಗಿದೆ.

ABOUT THE AUTHOR

...view details