ಬೆಂಗಳೂರು:ನಿರ್ಮಾಪಕ ಶಂಕರೇಗೌಡ ಹಾಗೂ ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಮನೆ ಮೇಲಿನ ದಾಳಿ ಪ್ರಕರಣದ ತನಿಖೆಯನ್ನು ಗೋವಿಂದಪುರ ಪೊಲೀಸರು ಚುರುಕುಗೊಳಿಸಿದ್ದಾರೆ.
ಈ ಕುರಿತಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಂಜಯನಗರದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಿನಿಮಾ ಮಾತುಕತೆ ನಡೆಸುವ ಹೆಸರಲ್ಲಿ ನಿರ್ಮಾಪಕ ಶಂಕರೇಗೌಡ ಡ್ರಗ್ ಪಾರ್ಟಿ ಆಯೋಜನೆ ಮಾಡುತ್ತಿದ್ದರಂತೆ. ಈ ಪಾರ್ಟಿಗಳಿಗೆ ಡ್ರಗ್ ಪೆಡ್ಲರ್ಗಳಾದ ಫಯೂಮ್ ಹಾಗೂ ಜಾನ್ ಡ್ರಗ್ ಸರಬರಾಜು ಮಾಡುತ್ತಿದ್ದರಂತೆ. ಇವರಿಂದ ಪಡೆದ ಡ್ರಗ್ಸ್ನ್ನು ಸೆಲೆಬ್ರಿಟಿಗಳಿಗೆ ಮಸ್ತಾನ್ ಸರಬರಾಜು ಮಾಡುತ್ತಿದ್ದು, ಡ್ರಗ್ಸ್ ಸರಬರಾಜು ಹಾಗೂ ವಿತರಣೆ ಮಾಡಲು 'ಒನ್ ಲವ್' ಎನ್ನುವ ಕೋಡ್ವರ್ಡ್ ಇಡಲಾಗಿತ್ತು ಎಂಬ ಮಾಹಿತಿ ಬೆಳೆಕಿಗೆ ಬಂದಿದೆ.
ನಣಿಮಣಿಯರಿಗೆ ಶುರುವಾಯ್ತು ಟೆನ್ಶನ್!
ನಿರ್ಮಾಪಕ ಶಂಕರೇಗೌಡ ಹಾಗೂ ಮಸ್ತಾನ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ನಟಿ ಮಣಿಯರಾದ ಸಂಜನಾ ಹಾಗೂ ರಾಗಿಣಿ ಹಾಜರಾಗುತ್ತಿದ್ದರು ಎಂಬ ಮಾಹಿತಿಯನ್ನು ಮಸ್ತಾನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಶಂಕರೇಗೌಡನ ನಿವಾಸದಲ್ಲಿ ತಡರಾತ್ರಿ ಏರ್ಪಡಿಸುತ್ತಿದ್ದ ಪಾರ್ಟಿಗಳಿಗೆ ತಮಿಳು, ತೆಲುಗು ಚಿತ್ರರಂಗದ ಹಲವು ನಿರ್ಮಾಪಕರು ನಟ, ನಟಿಯರು ಹಾಜರಾಗುತ್ತಿದ್ದರು. ನಟಿ ಮಣಿಯರನ್ನು ಮುಂದಿಟ್ಟಕೊಂಡು ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.