ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಆರೋಪಿ ಆದಿತ್ಯ ಆಳ್ವಾನನ್ನು ಮಾದಕ ವಸ್ತು ಸೇವನೆ ಪತ್ತೆ ಮಾಡುವ ಡೋಪಿಂಗ್ ಟೆಸ್ಟ್ಗೆ ಒಳಪಡಿಸಲಾಗಿದೆ.
ಈ ಹಿಂದೆ ಪ್ರಕರಣದ ಆರೋಪಿಗಳಾದ ನಟಿ ರಾಗಿಣಿ ಮತ್ತು ಸಂಜನಾ ಗ್ರಲಾನಿಯನ್ನು ಡೋಪಿಂಗ್ ಟೆಸ್ಟ್ ಮಾಡಿಸಲಾಗಿತ್ತು. ಬಳಿಕ ಉಳಿದ ಆರೋಪಿಗಳಿಗೂ ಟೆಸ್ಟ್ ಮಾಡಲಾಗಿತ್ತು. ಡೋಪಿಂಗ್ ಟೆಸ್ಟ್ ನಲ್ಲಿ ತಲೆಕೂದಲು, ಮೂತ್ರ ಹಾಗೂ ಉಗುರಿನ ಸ್ಯಾಪಲ್ ಪಡೆಯಲಾಗಿದ್ದು, ನಾಳೆ ಅಹಮದಾಬಾದ್ ಎಫ್ಎಸ್ಎಲ್ಗೆ ಸ್ಯಾಂಪಲ್ ರವಾನೆ ಮಾಡಲಿದ್ದಾರೆ.
ಓದಿ: ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’
ಈ ಹಿಂದೆ ಸಿಸಿಬಿ ಆದಿತ್ಯಾ ಆಳ್ವಾ ರೆಸಾರ್ಟ್ ಮೇಲೆ ದಾಳಿ ನಡೆಸಿದಾಗ ಕೆಲ ಮಾದಕವಸ್ತು ಪತ್ತೆಯಾಗಿತ್ತು. ಸದ್ಯ ತನಿಖೆ ವೇಳೆ ಪ್ರಕರಣ ಆರೋಪಿಯಾಗಿರುವ ವಿರೇನ್ ಖನ್ನಾ ಹಾಗೂ ಆದಿತ್ಯಾ ಆಳ್ವಾ ಇವರಿಬ್ಬರ ನಡುವೆ ತ್ರಿಪೇಜ್ ಪಾರ್ಟಿ ಆಯೋಜನೆ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಇಬ್ಬರೂ ಸಹ ಮಾತನಾಡುತ್ತಿರಲಿಲ್ಲ ಎಂಬುದರ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.