ಕರ್ನಾಟಕ

karnataka

ETV Bharat / state

ಭಾರತ-ಲಂಕಾದಲ್ಲಿ ಎಲ್​ಟಿಟಿಇ ಬೆಂಬಲಿಗರಿಗೆ ಶಸ್ತ್ರಾಸ್ತ್ರ, ಡ್ರಗ್ಸ್ ಮಾರಾಟ ದಂಧೆ: ತಮಿಳುನಾಡು, ಬೆಂಗಳೂರಲ್ಲಿ ಆರೋಪಿಗಳ ಬಂಧನ - ETV Bharath Kannada news

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ಭಾರತ ಮತ್ತು ಶ್ರೀಲಂಕಾದಲ್ಲಿ ಎಲ್​ಟಿಟಿಇ ಬೆಂಬಲಿಗರಿಗೆ ಅಕ್ರಮ ಶಸ್ತ್ರಾಸ್ತ್ರ ಹಾಗೂ ಮಾದಕ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದೆ.

Etv Bharat
ಭಾರತ-ಲಂಕಾದಲ್ಲಿ ಮಾದಕ ದಂಧೆ

By

Published : Dec 20, 2022, 9:45 AM IST

ಬೆಂಗಳೂರು: ಭಾರತ ಮತ್ತು ಶ್ರೀಲಂಕಾದಲ್ಲಿ ಎಲ್​ಟಿಟಿಇ ಬೆಂಬಲಿಗರಿಗೆ ಅಕ್ರಮ ಶಸ್ತ್ರಾಸ್ತ್ರ ಹಾಗೂ ಮಾದಕ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಒಂಬತ್ತು ಆರೋಪಿಗಳನ್ನು ರಾಷ್ಟ್ರೀಯ ತನಿಖಾದಳ ಬಂಧಿಸಿದೆ. ತಿರುಚಿಯ ಶ್ರೀಲಂಕಾ ಕ್ಯಾಂಪ್​ನಿಂದ ಗುಣಶೇಖರನ್, ಪುಷ್ಪರಾಜನ್,‌ ಮೊಹಮ್ಮದ್ ಆಸ್ಮಿನ್, ಅಲಹಪ್ಪೆ ಮುರುಗ ಸುನಿಲ್ ಗಾಮಿನಿ, ಸ್ಟ್ಯಾನ್ಲಿ ಕೆನಡಿ ಫರ್ನಾಂಡೊ, ಲಡಿಯಾ ಚಂದ್ರಸೇನ, ಧನುಕ್ಕಾ ರೋಷನ್, ವೆಲ್ಲ ಸುರಂಕ, ತಿಲಿಪ್ಪನ್ ಬಂಧಿತ ಆರೋಪಿಗಳು.

ಗುಣಶೇಖರನ್ ಹಾಗೂ ಪುಷ್ಪರಾಜನ್ ದಂಧೆಯ ಕಿಂಗ್ ಪಿನ್​ಗಳಾಗಿದ್ದು, ಪಾಕಿಸ್ತಾನ ಮೂಲದ ಹಾಜಿ ಸಲೀಂ ಜೊತೆ ಸೇರಿ ಭಾರತ ಹಾಗೂ ಶ್ರೀಲಂಕಾದಲ್ಲಿ ಮಾದಕ ದಂಧೆಯ ವ್ಯವಹಾರ ನಡೆಸುತ್ತಿದ್ದರು. ಬಂಧಿತ ಅಲಹಪ್ಪೆ ಮುರುಗ ಸುನೀಲ್ ಗಾಮಿನಿ ಬೆಂಗಳೂರಿನ ಹೆಚ್ಎಸ್ಆರ್ ಲೇಔಟಿನ ಮನೆಯೊಂದರಲ್ಲಿ ವಾಸವಾಗಿದ್ದ.

ಕಳೆದ ಜುಲೈನಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ನಗರಗಳಿಗೆ ಆರೋಪಿಗಳು ಮಾದಕ ಪದಾರ್ಥಗಳನ್ನ ಸರಬರಾಜು ಮಾಡಿರುವ ಶಂಕೆಯಿದ್ದು ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ:ಭಿಕ್ಷುಕಿ ಅನುಮಾನಾಸ್ಪದ ಸಾವು: ಸ್ಥಳದಲ್ಲಿ ಸುಳಿವು ಸಿಗದಿದ್ದರೂ ಕೊಲೆ ಪ್ರಕರಣ ಭೇದಿಸಿದ ಭದ್ರಾವತಿ ಪೊಲೀಸ್ರು!

ABOUT THE AUTHOR

...view details