ಬೆಂಗಳೂರು: ನಗರದಲ್ಲಿ ಗಾಂಜಾ ಮತ್ತು ಡ್ರಗ್ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆಯುಷ್ ಪಾಂಡೆ 22, ರೋಹಿತ್ ರಾಮ್ 22, ನೂರ್ ಅಲಿ 30 ಬಂಧಿತ ಆರೋಪಿಗಳು.
ಇವರು ಜಾರ್ಖಂಡ್ ಮತ್ತು ಅಸ್ಸೋಂ ಮೂಲದವರಾಗಿದ್ದಾರೆ. ಹೊಸ ವರ್ಷ ಹತ್ತಿರವಿರುವ ಕಾರಣ ಪಾರ್ಟಿಗಳಿಗೆ ಮಾದಕ ಪದಾರ್ಥ ಸರಬರಾಜು ಮಾಡಲು ಸಿದ್ಧತೆ ಮಾಡಿದ್ದರು ಎನ್ನಲಾಗಿದೆ. ಕೊರೊನಾ ಹಿನ್ನೆಲೆ ಕೆಲಸ ಬಿಟ್ಟಿರುವ ಕೊರಿಯರ್ ಬಾಯ್ಸ್ ಗಳನ್ನು ಈ ಚಾಕೋಲೆಟ್ಗಳ ಸಪ್ಲೈಗೆ ಬಳಕೆ ಮಾಡಲು ನಿರ್ಧಾರ ಮಾಡಿದ್ದರಂತೆ.
ಗಾಂಜಾ ಮತ್ತು ಡ್ರಗ್ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅಂದರ್ ಕೊರಿಯರ್ ಬಾಯ್ಸ್ಗೆ ಅಡ್ರೆಸ್ ಗೊತ್ತಿರುವ ಕಾರಣ ಅನುಮಾನ ಬಾರದ ರೀತಿಯಲ್ಲಿ ಟೆಡ್ಡಿ ಬೇರ್, ಸ್ಪೀಕರ್ ಬಾಕ್ಸ್, ಮೆಡಿಕಲ್ ಕಿಟ್ ಬಾಕ್ಸ್, ಖಾಲಿ ಸಿಪಿಯುಗಳಲ್ಲಿ ಮಾದಕ ವಸ್ತುಗಳನ್ನು ಸಪ್ಲೈ ಮಾಡಲು ಯೋಜನೆ ರೂಪಿಸಿದ್ದರಂತೆ.
ಚಾಕೊಲೇಟ್ ಚರಸ್ 4 ಕೆಜಿ 330ಗ್ರಾಂ, ಮ್ಯಾಂಗೋ ಗಾಂಜಾ 170 ಗ್ರಾಂ, ಹ್ಯಾಶ್ ಆಯಿಲ್ 120 ಗ್ರಾಂ, ಚರಸ್ 270 ಗ್ರಾಂ, ಬ್ರೌನ್ ಶುಗರ್ 8 ಗ್ರಾಂ, ಎಂಡಿಎಂಎ 9 ಗ್ರಾಂ, ಎಲ್ಎಸ್ಡಿ ಸ್ಟ್ರಿಪ್ಗಳು 100 ಸೇರಿ ಒಟ್ಟು 23 ಲಕ್ಷ 80 ಸಾವಿರ ರೂ. ಬೆಲೆಬಾಳುವ ಮಾದಕ ವಸ್ತು, ಕೃತ್ಯಕ್ಕೆ ಬಳಸಿದ್ದ 2 ಬೈಕ್, 3 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ.