ಕರ್ನಾಟಕ

karnataka

ETV Bharat / state

ಶಸ್ತ್ರಚಿಕಿತ್ಸೆ ನಂತರ ದೃಷ್ಟಿಯನ್ನೇ ಕಳೆದುಕೊಂಡ ರೋಗಿಗಳು... ಮಿಂಟೋ ಆಸ್ಪತ್ರೆಯಲ್ಲಿ ಸೇವೆ ಸ್ಥಗಿತ - undefined

ಕಣ್ಣಿನ ಚಿಕಿತ್ಸೆ- ಶಸ್ತ್ರಚಿಕಿತ್ಸೆಯಲ್ಲಿ ಹೆಸರಾಗಿರುವ ಮಿಂಟೋ ಕಣ್ಣಿನ ಆಸ್ಪತ್ರೆ ಈಗ ತನ್ನ ಸೇವೆಯನ್ನ ನಿಲ್ಲಿಸಿದೆ.

ಮಿಂಟೋ ಆಸ್ಪತ್ರೆ

By

Published : Jul 15, 2019, 1:53 AM IST

Updated : Jul 15, 2019, 2:34 AM IST

ಬೆಂಗಳೂರು:ಕಣ್ಣಿನ ಚಿಕಿತ್ಸೆ- ಶಸ್ತ್ರಚಿಕಿತ್ಸೆಯಲ್ಲಿ ಹೆಸರಾಗಿರುವ ಮಿಂಟೋ ಕಣ್ಣಿನ ಆಸ್ಪತ್ರೆ ಈಗ ತನ್ನ ಸೇವೆಯನ್ನ ನಿಲ್ಲಿಸಿದೆ.

ವಯೋಸಹಜ ಕಣ್ಣಿನ ಪೊರೆ ಸಮಸ್ಯೆಯಿಂದಾಗಿ 40 ರಿಂದ 80 ವರ್ಷಕ್ಕೂ ಮೇಲ್ಪಟ್ಟ 24 ಮಂದಿ ಕಳೆದ ಮಂಗಳವಾರ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಬುಧವಾರ ಕಣ್ಣಿನ ಪಟ್ಟಿ ಬಿಚ್ಚಿದಾಗ 20 ಕ್ಕೂ ಹೆಚ್ಚು ರೋಗಿಗಳಿಗೆ ದೃಷ್ಟಿ ಸಂಪೂರ್ಣ ಕಾಣಿಸದೇ ಮತ್ತೆ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

ಇದಾದ ಬಳಿಕವೂ ದೃಷ್ಟಿ ಸಮಸ್ಯೆ ಕಂಡುಬಂದಿದ್ದು, ಅವರನ್ನು ಮನೆಗೆ ಕಳುಹಿಸದೇ ಚಿಕಿತ್ಸೆ ಮುಂದುವರೆಸಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ರೋಗಿಗಳ ಕಣ್ಣುಗಳಲ್ಲಿ ಕೀವು ತುಂಬಿಕೊಂಡು ಸೋಂಕು ಹೆಚ್ಚಾಗಿದೆ. ಅದಕ್ಕಾಗಿ ಅವರ ಕಣ್ಣಿಗೆ ಕಳೆದ ಮೂರು ದಿನಗಳಿಂದ ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ. ಈ ಘಟನೆ ನಡೆದ ನಂತರ ಆಸ್ಪತ್ರೆಯಲ್ಲಿ ಬೇರೆ ಯಾವುದೇ ಶಸ್ತ್ರಚಿಕಿತ್ಸೆ ನಡೆದಿಲ್ಲ. ಜೊತೆಗೆ ರೋಗಿಗಳನ್ನು ದಾಖಲು ಮಾಡಿಕೊಂಡಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾಥಾ ರಾಥೋಡ್, ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದು, ದೃಷ್ಟಿ ಸಮಸ್ಯೆಯಾಗಿರುವವರ ಲ್ಯಾಬ್ ವರದಿ ಸೋಮವಾರ ಸಿಗಲಿದೆ. ವರದಿ ಬಂದ ನಂತರವೇ ಈ ಕುರಿತು ವಿಚಾರಣೆ ನಡೆಸಲಾಗುವುದು. ಅಂದು ಶಸ್ತ್ರಚಿಕಿತ್ಸೆಗೊಳಗಾದ 4 ರೋಗಿಗಳ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಈಗಾಗಲೇ ಗುಣಮುಖವಾಗಿ ಮನೆ ಸೇರಿದ್ದಾರೆ. 8 ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಉಳಿದ 10 ಮಂದಿ ದೃಷ್ಟಿ ಸಮಸ್ಯೆಯಾಗಿದ್ದು, ಹೆಚ್ಚುವರಿ ಚಿಕಿತ್ಸೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ಹೊರ ರೋಗಿಗಳ ಸೇವೆ ಮಾತ್ರ ಇದ್ದು,‌ ಶಸ್ತ್ರಚಿಕಿತ್ಸೆ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Last Updated : Jul 15, 2019, 2:34 AM IST

For All Latest Updates

TAGGED:

ABOUT THE AUTHOR

...view details