ಬೆಂಗಳೂರು: ನಗರವನ್ನು ಡ್ರಗ್ ಮುಕ್ತ ಮಾಡಲು ಪಣತೊಟ್ಟಿರುವ ಸರ್ಕಾರದ ಆದೇಶವನ್ನ ಪೊಲೀಸರು ಚಾಚು ತಪ್ಪದೇ ಪಾಲನೆ ಮಾಡುತ್ತಿದ್ದಾರೆ. ಸದ್ಯ ಪೂರ್ವ ವಿಭಾಗದ ಪೊಲೀಸರು ಡ್ರಗ್ ಪೆಡ್ಲರ್ಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಡ್ರಗ್ ಪೆಡ್ಲರ್ಗಳ ವಿರುದ್ಧ ಮುಂದುವರೆದ ಪೊಲೀಸ್ ಕಾರ್ಯಾಚರಣೆ: ಓರ್ವನ ಬಂಧನ - Bengaluru
ಪೂರ್ವ ವಿಭಾಗದ ಪೊಲೀಸರು ಡ್ರಗ್ ಪೆಡ್ಲರ್ಗಳ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ನವೀನ್ ಬಂಧಿತ ಆರೋಪಿ
ನವೀನ್ ಬಂಧಿತ ಆರೋಪಿ. ಲಾಕ್ಡೌನ್ ತೆರವುಗೊಳಿಸಿದ ಬಳಿಕ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸಾಗಣೆ ಹಾಗೂ ಮಾರಾಟ ಜಾಲದಲ್ಲಿ ಈತ ತೊಡಗಿದ್ದ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಳೆದ 12 ದಿನಗಳಲ್ಲಿ ಪೊಲೀಸರು ಒಟ್ಟು 98 ಪ್ರಕರಣಗಳನ್ನು ದಾಖಲಿಸಿ 98ಮಂದಿಯನ್ನ ಬಂಧಿಸಿದ್ದಾರೆ.