ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಅಂತರ್‌ರಾಜ್ಯ ಡ್ರಗ್ ಪೆಡ್ಲರ್​​ಗಳ ಬಂಧನ - drug peddlers

ಆರೋಪಿಗಳು ಮೋಜಿನ ಜೀವನ ನಡೆಸಲು ಮಾದಕ ವಸ್ತುಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಯಿಂದ ನಗರಕ್ಕೆ ತಂದು ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ವೇರ್ ಕಂಪನಿ ನೌಕರರಿಗೆ ಮಾರಾಟ ಮಾಡುತ್ತಿದ್ದ ವಿಚಾರ ವಿಚಾರಣೆ ವೇಳೆ ಬಯಲಾಗಿದೆ.

drug peddlers arrested
ಅಂತರ್ ರಾಜ್ಯ ಡ್ರಗ್ ಪೆಡ್ಲರ್​​ಗಳ ಬಂಧನ

By

Published : Dec 29, 2020, 12:11 PM IST

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಡ್ರಗ್ ಪೆಡ್ಲರ್​​​ಗಳನ್ನು ಆಗ್ನೇಯ ವಿಭಾಗದ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಅಂತರ್ ರಾಜ್ಯ ಡ್ರಗ್ ಪೆಡ್ಲರ್​​ಗಳ ಬಂಧನ

ಕೆ. ಪ್ರೀತಿಪಾಲ್, ಕೆ. ಖಲಂದರ್ ಬಂಧಿತರು. ಈ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಮೋಜಿನ ಜೀವನಕ್ಕಾಗಿ ಮಾದಕ ವಸ್ತುಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಯಿಂದ ನಗರಕ್ಕೆ ತಂದು ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್ವೇರ್ ಕಂಪನಿ ನೌಕರರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ.

ಪ್ರಮುಖ ಆರೋಪಿ ಕೆ. ಪ್ರೀತಿಪಾಲ್ ಈ ಹಿಂದೆ ಗೋವಾ, ಕೇರಳ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದನಂತೆ. ಈತನ ವಿರುದ್ಧ ಮಂಗಳೂರಿನ ಪುತ್ತೂರು ಟೌನ್ ಠಾಣೆಯಲ್ಲಿ 3 ಪ್ರಕರಣ, ಬಂಟ್ವಾಳ, ಉಡುಪಿ ಬಂದರು ಹಾಗೂ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಈತ ಒಂದು ಸಲ ಬಂಧಿಸಲ್ಪಟ್ಟು ನ್ಯಾಯಾಲಯದಿಂದ ಜಾಮೀನು ಪಡೆದು, ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಈತನ ಮೇಲೆ 8 ಕ್ರಿಮಿನಲ್ ಪ್ರಕರಣವಿದ್ದು, ಪೊಲೀಸರು 65 ಲಕ್ಷ ರೂ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ಇನ್ನುಳಿದ ಸಹಚರರಿಗೆ ಶೋಧಕಾರ್ಯ ಮುಂದುವರೆದಿದೆ.

ABOUT THE AUTHOR

...view details