ಬೆಂಗಳೂರು : ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ಅಭಿಜಿತ್ ಎಂದು ಗುರುತಿಸಲಾಗಿದೆ. ಅಭಿಜಿತ್ನಿಂದ ಸುಮಾರು 4 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಬಿಹಾರ ಮೂಲದ ಮತ್ತೋರ್ವ ಆರೋಪಿ ಆದೇಶದ ಅನ್ವಯ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಹಿಂದೆ ಸ್ವಿಗ್ಗಿ, ಜೊಮ್ಯಾಟೋ ಕಂಪನಿಗಳಲ್ಲಿ ಡಿಲವರಿ ಬಾಯ್ ಕೆಲಸ ಮಾಡಿಕೊಂಡಿದ್ದ ಅಭಿಜಿತ್ ಕೆಲಸ ಬಿಟ್ಟ ಬಳಿಕ ಸಮವಸ್ತ್ರ ಹಾಗೂ ಬ್ಯಾಗನ್ನು ವಾಪಾಸ್ ನೀಡಿರಲಿಲ್ಲ. ಬಿಹಾರ ಮೂಲದ ಪ್ರಮುಖ ಆರೋಪಿಯಿಂದ ಮಾದಕ ಪದಾರ್ಥ ಹಾಗೂ ಅದನ್ನು ತಲುಪಿಸಬೇಕಿರುವ ಲೋಕೇಶನ್ ಪಡೆಯುತ್ತಿದ್ದ ಅಭಿಜಿತ್, ಡಿಲಿವರಿ ಬಾಯ್ ಸೋಗಿನಲ್ಲಿ ಮಾದಕ ಪದಾರ್ಥಗಳನ್ನ ಕೊಂಡೊಯ್ದು ಲೊಕೇಶನ್ನಿನಲ್ಲಿರಿಸಿ ಬರುತ್ತಿದ್ದ.ಇದರಿಂದಾಗಿ ಗಿರಾಕಿಗಳು ಯಾರು ಎಂಬುದು ಸಹ ಅಭಿಜಿತ್ಗೆ ಗೊತ್ತಾಗುತ್ತಿರಲಿಲ್ಲ.