ಕರ್ನಾಟಕ

karnataka

ETV Bharat / state

ವಾಟರ್ ಕ್ಯಾನ್ ಸಪ್ಲೈ ನೆಪದಲ್ಲಿ ಗಾಂಜಾ ಮಾರಾಟ: ಬೆಂಗಳೂರಲ್ಲಿ ಯುವಕನ ಬಂಧನ - drug peddler arrested in banglore

ವಾಟರ್ ಕ್ಯಾನ್ ಮಾರಾಟದ ನೆಪದಲ್ಲಿ ಗಾಂಜಾ ಮಾರಾಟ- ಬೆಂಗಳೂರಲ್ಲಿ ಆರೋಪಿ ಬಂಧನ- ಪೊಲೀಸರಿಂದ ಗಾಂಜಾ ವಶ

drug-peddler-arrested-in-banglore
ವಾಟರ್ ಕ್ಯಾನ್ ಸಪ್ಲೈ ನೆಪದಲ್ಲಿ ಗಾಂಜಾ ಮಾರಾಟ: ಯುವಕನ ಬಂಧನ

By

Published : Jul 31, 2022, 3:10 PM IST

ಬೆಂಗಳೂರು : ಬ್ಯಾಡರಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಧನುಷ್ ಎಂದು ಗುರುತಿಸಲಾಗಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿ ಗ್ರೂಪ್ ಲೇಔಟ್ ಹತ್ತಿರದ ಪಾರ್ಕ್ ಬಳಿ ಆರೋಪಿ ಧನುಷ್ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ‌ ಮೇಲೆ ದಾಳಿ ನಡೆಸಿದ ಪೊಲೀಸರು‌ ಆತನನ್ನು ಬಂಧಿಸಿದ್ದಾರೆ. ಬಂಧಿತನಿಂದ 930 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಆಂಧ್ರಪ್ರದೇಶದಿಂದ ಗಾಂಜಾ ತಂದು ಮಾರಾಟದಲ್ಲಿ ತೊಡಗಿದ್ದ. ವಾಟರ್ ಕ್ಯಾನ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಸದ್ಯ ಧನುಷ್ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಓದಿ :ದಾವಣಗೆರೆ ಜನಸಂಪರ್ಕ ಕಚೇರಿ ಒಳಗಡೆ ನಿಲ್ಲಿಸಿದ್ದ ಕಾರಿನಲ್ಲಿ ಮಾರಕಾಸ್ತ್ರ ಪತ್ತೆ: ದೂರು ದಾಖಲು

ABOUT THE AUTHOR

...view details