ಬೆಂಗಳೂರು: ಕೊರೊನಾ ಹಿನ್ನೆಲೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಆದರೂ, ವಿದ್ಯಾರ್ಥಿಗಳನ್ನು ಕಾಲೇಜು ಬಳಿ ಕರೆಸಿ ಮಾದಕ ವಸ್ತು ಮಾರುತ್ತಿದ್ದ ವೇಳೆ ಡ್ರಗ್ ಪೆಡ್ಲರ್‌ನನ್ನು ಪೊಲೀಸರು ರೆಡ್ಹ್ಯಾಂಡಾಗಿ ಬಂಧಿಸಿದ್ದಾರೆ.
ನಗರದ ಈಸ್ಟ್ ವೆಸ್ಟ್ ಕಾಲೇಜಿನ ಬಳಿ ಗಾಂಜಾ ಮಾರುತ್ತಿದ್ದಾಗ ಬ್ಯಾಡರಹಳ್ಳಿ ಪೊಲೀಸರು ಯೋಗೇಶ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 2 ಕೆಜಿ 90 ಗ್ರಾಂ ಗಾಂಜಾ ಹಾಗೂ ಒಂದು ಸಾವಿರ ನಗದನ್ನು ವಶ ಪಡಿಸಿಕೊಳ್ಳಲಾಗಿದೆ.