ಕರ್ನಾಟಕ

karnataka

ETV Bharat / state

ವೈದ್ಯಕೀಯ ತಪಾಸಣೆ ಬಳಿಕ ಸೈಲೆಂಟ್​ ಆದ ನಟಿಮಣಿಯರು: ಕಾರಣ ಏನ್​ ಗೊತ್ತಾ? - ಸ್ಯಾಂಡಲ್​ವುಡ್

ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾದ ರಾಗಿಣಿ ಹಾಗೂ ಸಂಜನಾ, ಮಾದಕ ದ್ರವ್ಯ ಸೇವನೆಯ ತಪಾಸಣೆ ಮಾಡಲು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸೈಲೆಂಟ್​ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಗಿಣಿ ಹಾಗೂ ಸಂಜನಾ
ರಾಗಿಣಿ ಹಾಗೂ ಸಂಜನಾ

By

Published : Sep 13, 2020, 1:20 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾದ ನಟಿ‌ಮಣಿಯರು ಆರಂಭದಲ್ಲಿ ಹಾರಾಡ್ತಾ ಇದ್ದವರು, ಇದೀಗ ಮಾದಕ ದ್ರವ್ಯ ಸೇವನೆಯ ತಪಾಸಣೆ ಮಾಡಲು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸೈಲೆಂಟ್​ ಆಗಿದ್ದಾರೆ.

"ನಮ್ಮನ್ನ ಇಲ್ಲೇಕೆ ಕರೆತಂದ್ರಿ, ಅಲ್ಲಿಗೆ ಯಾಕೆ ಕರೆದೋಯ್ತಿದ್ದೀರಾ" ಅಂತಾ ಆರಂಭದಲ್ಲಿ ಆರ್ಭಟ ತೋರಿಸಿದವರು ಸದ್ಯ ತನಿಖಾಧಿಕಾರಿಗಳು ಕರೆದೊಯ್ದ ಕಡೆಯಲ್ಲಿ ಸೈಲೆಂಟಾಗಿ ಬರುತ್ತಿದ್ದಾರಂತೆ.

ಸದ್ಯ ಸಿಸಿಬಿ ಉನ್ನತ ಮೂಲಗಳ ಮಾಹಿತಿ ಪ್ರಕಾರ, ತನಿಖೆಗೆ ನಟಿಮಣಿಯರು ಮೊದಲು ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಆದರೆ ಸದ್ಯ ವಾಸ್ತವ ಪರಿಸ್ಥಿತಿ, ಹಾಗೂ ಟೆಕ್ನಿಕಲ್ ಸಾಕ್ಷ್ಯಗಳನ್ನು ಮುಂದಿಟ್ಟು ವಿಚಾರಣೆ ನಡೆಸಿದಾಗ ತನಿಖಾಧಿಕಾರಿಯ ಮುಂದೆ ಪಾರ್ಟಿಯಲ್ಲಿ ಯಾರೆಲ್ಲಾ ಭಾಗಿಯಾಗುತ್ತಿದ್ದರು ಎಂಬೆಲ್ಲಾ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿರುವ ಪೊಲೀಸರು

ಹೀಗಾಗಿ ಈ ವಿಚಾರವನ್ನ ಸಿಸಿಬಿ ಇನ್​ಸ್ಪೆಕ್ಟರ್​ ಪುನೀತ್ ಹಾಗೂ ಇನ್​ಸ್ಪೆಕ್ಟರ್ ಅಂಜುಮಾಲಾ ಅವರು ನಟಿಯರು ಹೆಸರಿಸಿದ ರಾಜಕಾರಣಿಗಳ, ಉದ್ಯಮಿಗಳ, ನಟರ ಹೆಸರನ್ನ ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ನೀಡಿದ್ದಾರೆ. ನಟಿಯರು ಹೇಳಿರುವ ರಾಜಕಾರಣಿಗಳ ಹೆಸರು, ಉದ್ಯಮಿಯರ ಹೆಸರು ಪರಿಶೀಲಿಸಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆಯಿದೆ. ನಟಿಯರು ಹೇಳಿರುವ ವ್ಯಕ್ತಿಗಳು ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿದ್ದ ಪರಿ, ಅವರ ಹಿನ್ನೆಲೆ ಏನು ಎಂಬೆಲ್ಲಾ ವಿಚಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮತ್ತೊಂದೆಡೆ ಸಿಸಿಬಿ ಕಚೇರಿಯಲ್ಲಿರುವ ವಿರೇನ್ ಖನ್ನಾ, ಪ್ರತೀಕ್ ಶೆಟ್ಟಿ, ರವಿಶಂಕರ್​ಗೆ ವೈದ್ಯಕೀಯ ಪರೀಕ್ಷೆ ನಡೆಸಲು ಕೆಸಿ ಜನರಲ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಏಕೆಂದರೆ, ನಾಳೆ ಆರೋಪಿಗಳ ಕಸ್ಟಡಿ ಅವಧಿ ಅಂತ್ಯ ಹಿನ್ನೆಲೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನಂತರ ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ABOUT THE AUTHOR

...view details