ಬೆಂಗಳೂರು: ಡ್ರಗ್ ಪೆಡ್ಲರ್ಸ್ ಮೇಲೆ ನಗರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದಂಧೆಕೋರರು ಪೊಲೀಸರ ಕಣ್ತಪ್ಪಿಸಲು ಡ್ರಗ್ ಡೀಲಿಂಗ್ ಆ್ಯಪ್ ಮೊರೆ ಹೋಗಿದ್ದಾರೆ. ಆ್ಯಪ್ ಮೂಲಕ ವ್ಯವಹರಿಸುತ್ತಿದ್ದ ಪೆಡ್ಲರ್ಸ್ಗಳ ಪೈಕಿ ಸಿಸಿಬಿ ಪೊಲೀಸರು ನಾಲ್ವರನ್ನು ಸೆರೆ ಹಿಡಿದಿದ್ದಾರೆ. 4.5 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳ ಜಪ್ತಿ ಮಾಡಲಾಗಿದೆ.
ಆ್ಯಪ್ ಮೂಲಕ ಡ್ರಗ್ ಡೀಲಿಂಗ್; ಬೆಂಗಳೂರಿನಲ್ಲಿ ನಾಲ್ವರ ಬಂಧನ - ಈಟಿವಿ ಭಾರತ ಕನ್ನಡ
ಆ್ಯಪ್ ಮುಖಾಂತರ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರಿಸಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ ಡೀಲಿಂಗ್ಗೂ ಬಂತು ಮೊಬೈಲ್ ಆ್ಯಪ್
ಜಿತಿನ್, ರೋಹನ್, ಯಶ್ವಂತ್, ಶಲ್ಬಿನ್ ಬಂಧಿತರು. ವಿಕರ್ ಮೀ ಆ್ಯಪ್ ಮೂಲಕ ಕೇರಳ ಮೂಲದ ಪೆಡ್ಲರ್ಗಳಿಂದ ಡ್ರಗ್ಸ್ ಪಡೆದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳಿಗೆ ಮಾದಕ ದ್ರವ್ಯ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:30 ಕೋಟಿ ಬೆಲೆ ಬಾಳುವ ಡ್ರಗ್ಸ್ ವಶ.. ಮೂವರ ಬಂಧನ