ಬೆಂಗಳೂರು:ಒಬ್ಬ ಯೂಟ್ಯೂಬರ್, ಇನ್ನೊಬ್ಬ ವ್ಯಕ್ತಿ ಪಿಜಿಯಲ್ಲಿ(ಪೇಯಿಂಗ್ ಗೆಸ್ಟ್) ಇದ್ದುಕೊಂಡು ಸದ್ದಿಲ್ಲದೆ ಕೋಟಿ ಕೋಟಿ ರೂ ಮೌಲ್ಯದ ಡ್ರಗ್ ಡೀಲ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಗರದಲ್ಲಿ ಗಾಂಜಾ ಮಾರಾಟದ ಅಕ್ರಮ ಕಸುಬಿನಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಾದ ಅಸ್ಫಾಕ್ ಮತ್ತು ಶಿಫಾಸ್ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಇಬ್ಬರು ಡೀಲರ್ಗಳ ಬಂಧನ
ಉದ್ಯಾನನಗರಿಯಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಇಬ್ಬರು ಡ್ರಗ್ ಡೀಲರ್ಗಳನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಡ್ರಗ್ ಡೀಲರ್ಗಳ ಬಂಧನ
ಶಿಫಾಸ್ ಕೇರಳ ಮತ್ತು ಅಸ್ಫಾಕ್ ಕರಾವಳಿಯ ಬಂಟ್ವಾಳ ಮೂಲದವನು. ಶಿಫಾಸ್ ಯುಟ್ಯೂಬ್ ಚಾನೆಲ್ ಮಾಡಿಕೊಂಡು ಅದರ ಜೊತೆಗೆ ಡ್ರಗ್ಸ್ ಸಪ್ಲೈ ಮಾಡೋ ಕೆಲಸವನ್ನೂ ಮಾಡುತ್ತಿದ್ದ. ಅಸ್ಫಾಕ್ ಮಡಿವಾಳದಲ್ಲಿ ಪಿಜಿಯಲ್ಲಿ ಇದ್ದುಕೊಂಡು ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳಿಂದ 2 ಕೆ.ಜಿ 70ಗ್ರಾಂ ಹಷಿಷ್ ಎಣ್ಣೆ, 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಕುಡಿತ ಬಿಡುವಂತೆ ಪೋಷಕರಿಂದ ಬುದ್ಧಿವಾದ : ಮನನೊಂದು ವ್ಯಕ್ತಿ ಆತ್ಮಹತ್ಯೆ