ಕರ್ನಾಟಕ

karnataka

ಡ್ರಗ್ಸ್​​​ ಜಾಲ: ಇಂದು ಇಬ್ಬರು ಸೀರಿಯಲ್​ ಸ್ಟಾರ್​ಗಳ ವಿಚಾರಣೆ ನಡೆಸಲಿರುವ ಐಎಸ್​ಡಿ

By

Published : Sep 22, 2020, 9:19 AM IST

ಸ್ಯಾಂಡಲ್‌ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ತನಿಖೆಯ ಬೆನ್ನಲ್ಲೇ ಅಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅಧಿಕೃತವಾಗಿ ಫೀಲ್ಡ್​​ಗೆ ಇಳಿದಿದ್ದಾರೆ.

drug case of sandalwood: investigation of two serial stars today
ಸ್ಯಾಂಡಲ್‌ವುಡ್​ಗೆ ಡ್ರಗ್​ ನಂಟು ಆರೋಪ: ಇಂದು ಇಬ್ಬರು ಸೀರಿಯಲ್​ ಸ್ಟಾರ್​ಗಳ ವಿಚಾರಣೆ

ಬೆಂಗಳೂರು: ಸ್ಯಾಂಡಲ್‌ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಸಿಸಿಬಿ ಪೊಲೀಸರ ತನಿಖೆ ಬೆನ್ನಲ್ಲೇ ಫೀಲ್ಡ್​​ಗೆ ಇಳಿದಿರುವ ಐಎಸ್​ಡಿ ಪೊಲೀಸರು, ಕಿರುತೆರೆಯ ಸ್ಟಾರ್​ಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇಂದು 10 ಗಂಟೆಗೆ ಕಿರುತೆರೆ ನಟ ಅಭಿಶೇಕ್ ಹಾಗೂ ನಟಿ ಗೀತಾ ಭಾರತೀ ಭಟ್​ ವಿಚಾರಣೆ ನಡೆಸಲಿದ್ದಾರೆ.

ಸಿಸಿಬಿ ಪೊಲೀಸರ ತನಿಖೆಯ ಬೆನ್ನಲ್ಲೇ ಅಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅಧಿಕೃತವಾಗಿ ಫೀಲ್ಡ್​​ಗೆ ಇಳಿದಿದ್ದಾರೆ. ಈಗಾಗಲೇ ಮಾದಕ ನಂಟಿನ ಅನುಮಾನದ ಆಧಾರದ ಮೇಲೆ ಆಂತರಿಕಾ ಭದ್ರತಾ ವಿಭಾಗದ ಪೊಲೀಸರು ನಟ ಲೂಸ್ ಮಾದ ಯೋಗಿ, ಮಾಜಿ ಕ್ರಿಕೆಟಿಗ ಎನ್.​​ಸಿ.ಅಯ್ಯಪ್ಪ, ಸೀರಿಯಲ್ ಆ್ಯಕ್ಟರ್ ರಶ್ಮಿ ಚೆಂಗಪ್ಪ, ಖಾಸಗಿ ವಾಹಿನಿ ಸಿಬ್ಬಂದಿ ನಿಶ್ಚಿತಾ ಶರತ್​ ಅವರ ವಿಚಾರಣೆ ನಡೆಸಿದ್ದು, 12 ಜನರಿಗೆ ನೋಟಿಸ್​ ನೀಡಿದೆ.

ವಿಚಾರಣೆ ವೇಳೆ ಡ್ರಗ್ಸ್ ಡೀಲ್, ಡ್ರಗ್ಸ್ ಸಪ್ಲೈ ಸಂಬಂಧ ಒಂದಷ್ಟು ಮಹತ್ವದ ಮಾಹಿತಿಗಳನ್ನು ಕಲೆಹಾಕಿರುವ ಐಎಸ್​ಡಿ ಪೊಲೀಸರು, ಮತ್ತಷ್ಟು ಸೆಲೆಬ್ರಿಟಿಗಳು, ರಾಜಕೀಯ ‌ಮುಖಂಡರ ಮಕ್ಕಳಿಗೆ ನೋಟಿಸ್ ನೀಡೋಕೆ ಸಿದ್ಧತೆ ನಡೆಸಿದ್ದಾರೆ.

ಮಾದಕ ವಸ್ತು ಜಾಲ ಪತ್ತೆಗೆ ಮುಂದಾದ ಐಎಸ್​ಡಿ: ಇಂದು 12 ಜನರ ವಿಚಾರಣೆ ಸಾಧ್ಯತೆ ​

ಸ್ಯಾಂಡಲ್‌ವುಡ್‌ನ ಡ್ರಗ್ಸ್ ಆರೋಪ ಪ್ರಕರಣ ಯಾವಾಗ ಬೆಳಕಿಗೆ ಬಂತೋ ನಗರದ ವಿವಿಧ ವಲಯದ ಎಲ್ಲಾ ಪೊಲೀಸರು ತಮ್ಮ ಕಾರ್ಯವನ್ನು ಚುರುಕುಗೊಳಿಸಿದ್ರು. ನಗರದ ಹಲವೆಡೆ ಡ್ರಗ್ಸ್​ ಪೆಡ್ಲರ್ಸ್ ಐಎಸ್​ಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ರು. ಬಂಧಿತರ ಬಳಿ ಗಾಂಜಾ, ಎಲ್​ಎಸ್​ಡಿ ಮಾತ್ರೆಗಳು ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತುಗಳನ್ನು ಐಎಸ್​ಡಿ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ರು.

ವಿಚಾರಣೆ ವೇಳೆ ಸಿನಿಮಾ ಮತ್ತು ಸೀರಿಯಲ್​ಗಳ ನಟ, ನಟಿಯರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ಬಗ್ಗೆ ಬಾಯಿ​ ಬಿಟ್ಟಿದ್ದಾರೆ. ಆ ಹೆಸರುಗಳಲ್ಲಿ ರಾಜಕೀಯ ‌ಮುಖಂಡರ ಮಕ್ಕಳು, ಅಧಿಕಾರಿಗಳ ‌ಮಕ್ಕಳು, ಸಿನಿಮಾ ನಟ-ನಟಿಯರು ಇದ್ದಾರೆಂದು ಐಎಸ್​ಡಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ನಾಲ್ವರು ಸ್ಟಾರ್​ಗಳಿಗೆ ವಿಚಾರಣೆ ಬಿಸಿ ಮುಟ್ಟಿಸಿರುವ ಐಎಸ್​ಡಿ ಪೊಲೀಸರು, ಇಂದು ಕಿರುತೆರೆ ನಟ ಅಭಿಶೇಕ್ ಹಾಗೂ ನಟಿ ಗೀತಾ ಭಾರತೀ ಭಟ್​​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ನೀಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಐಎಸ್​ಡಿ ಪೊಲೀಸರ ಮುಂದೆ ಹಾಜರಾಗಲು ಸೂಚಿಸಿದ್ದಾರೆ. ಸದ್ಯ ಐಎಸ್​ಡಿ ಪೊಲೀಸರ ತನಿಖೆಯಲ್ಲಿ ಬಹುತೇಕ ಸೀರಿಯಲ್ ನಟ-ನಟಿಯರ ಹೆಸರೇ ಹೆಚ್ಚಾಗಿ ‌ಕೇಳಿ ಬರ್ತಿದೆ.

ABOUT THE AUTHOR

...view details