ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಂಟು ಸಂಬಂಧ ಆರೋಪಿಗಳ ಸಹಚರನೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ, ಎಸಿಪಿ ಸೇರಿದಂತೆ ಇಬ್ಬರನ್ನು ಅಮಾನತು ಮಾಡಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಡ್ರಗ್ಸ್ ದಂಧೆ ಆರೋಪಿಗಳ ಸಹಚರರಿಗೆ ತನಿಖಾ ಮಾಹಿತಿ ಸೋರಿಕೆ: ಎಸಿಪಿ ಸೇರಿದಂತೆ ಇಬ್ಬರು ಸಸ್ಪೆಂಡ್
ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಂಟು ಸಂಬಂಧ ಆರೋಪಿಗಳ ಸಹಚರನೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಸಿಸಿಬಿ, ಎಸಿಪಿ ಸೇರಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ.
ಸಂದೀಪ್ ಪಾಟೀಲ್
ಸಿಸಿಬಿ ಮಹಿಳಾ ಸುರಕ್ಷತಾ ದಳ ಎಸಿಪಿಯಾಗಿ ಕಳೆದ ಎಂಟು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮುದವಿ ಹಾಗೂ ಹೆಡ್ ಕಾನ್‌ಸ್ಟೇಬಲ್ ಮಲ್ಲಿಕಾರ್ಜುನ್ ಎಂಬುವರು ಅಮಾನತುಗೊಂಡಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣ ತನಿಖೆ ಹಂತದಲ್ಲಿರುವಾಗ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಹಾಗೂ ಸಹಚರರೊಂದಿಗೆ ಸಂಪರ್ಕದಲ್ಲಿದ್ದು ತನಿಖಾ ಮಾಹಿತಿ ಸೋರಿಕೆ ಮಾಡಿದ್ದರು. ಈ ಮೂಲಕ ತನಿಖೆ ಹಿನ್ನೆಡೆಗೆ ಕಾರಣಕರ್ತರಾಗಿರುವುದು ಕಂಡು ಬಂದಿತ್ತು ಎಂದು ಆದೇಶದಲ್ಲಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Last Updated : Sep 23, 2020, 8:05 PM IST