ಕರ್ನಾಟಕ

karnataka

ETV Bharat / state

ರಾಗಿಣಿ ಆಪ್ತ ಶ್ರೀನಿವಾಸ್​ಗೆ ಕೊರೊನಾ ಪಾಸಿಟಿವ್.. ತನಿಖಾಧಿಕಾರಿಗಳಿಗೆ ಆತಂಕ.. - ಸ್ಯಾಂಡಲ್​ವುಡ್​ ಡ್ರಗ್​ ನಂಟು ಪ್ರಕರಣ

ಸಿಸಿಬಿ ಅಧಿಕಾರಿಗಳು ಶ್ರೀಯನ್ನು ಬಹಳ ಹತ್ತಿರದಿಂದ ವಿಚಾರಣೆ ನಡೆಸಿದ್ದು, ಈಗ ಅವರಿಗೂ ಕೊರೊನಾ ಸೋಂಕು ತಗುಲಿರುವ ಆತಂಕ ಕಾಡುತ್ತಿದೆ..

Drug Case accused Srinivas tested Corona Positive
ರಾಗಿಣಿ ಆಪ್ತ ಶ್ರೀನಿವಾಸ್​ಗೆ ಕೊರೊನಾ ಪಾಸಿಟಿವ್

By

Published : Sep 23, 2020, 3:37 PM IST

ಬೆಂಗಳೂರು :ಸ್ಯಾಂಡಲ್​ವುಡ್​ ಡ್ರಗ್ಸ್‌​ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತ ನಟಿ ರಾಗಿಣಿ ಆಪ್ತಶ್ರೀನಿವಾಸ್ ಅಲಿಯಾಸ್ ಶ್ರೀಗೆ ಕೊರೊನಾ ಪಾಸಿಟಿವ್ ಬಂದಿದೆ.

ಶ್ರೀಯನ್ನು ಸಿಸಿಬಿ ಪೊಲೀಸರು ನಿನ್ನೆ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ, ಆತನನ್ನು ಕೋರಮಂಗಲದ ನೇತ್ರಾವತಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನಿಡಲಾಗ್ತಿದೆ.

ಕೊರೊನಾದಿಂದ ಗುಣಮುನಾದ ಬಳಿಕ ಸಿಸಿಬಿ ಮತ್ತೆ ವಶಕ್ಕೆ ಪಡೆಯಲಿದೆ. ಮತ್ತೊಂದೆಡೆ ಶ್ರೀನಿವಾಸ್ ಅಲಿಯಾಸ್ ಶ್ರೀಯನ್ನ ವಿಚಾರಣೆಗೊಳಪಡಿಸಿದ ಸಿಸಿಬಿ ಹಿರಿಯ ಅಧಿಕಾರಿಗಳಿಗೂ ಕೊರೊನಾ ಭೀತಿ ಎದುರಾಗಿದೆ.

ಸಿಸಿಬಿ ಅಧಿಕಾರಿಗಳು ಶ್ರೀಯನ್ನು ಬಹಳ ಹತ್ತಿರದಿಂದ ವಿಚಾರಣೆ ನಡೆಸಿದ್ದು, ಈಗ ಅವರಿಗೂ ಕೊರೊನಾ ಸೋಂಕು ತಗುಲಿರುವ ಆತಂಕ ಕಾಡುತ್ತಿದೆ.

ABOUT THE AUTHOR

...view details