ಕರ್ನಾಟಕ

karnataka

ETV Bharat / state

ದ್ರೌಪದಿ ಮುರ್ಮು ಭಾನುವಾರ ಬೆಂಗಳೂರಿಗೆ ಆಗಮನ; ಸಂಸದರು, ಶಾಸಕರ ಬಳಿ ಮತಯಾಚನೆ! - ನಾಳೆ ಕರ್ನಾಟಕ್ಕೆ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಳೆ ಬೆಂಗಳೂರಿಗೆ

ಎನ್​​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದು ಬಿಜೆಪಿ ನಾಯಕರು ಅದ್ದೂರಿಯಾಗಿ ಸ್ವಾಗತ ಕೋರಲಿದ್ದಾರೆ.

dravpadi murumu
ಇಂದು ದ್ರೌಪದಿ ಮುರ್ಮು ಬೆಂಗಳೂರಿಗೆ ಆಗಮನ; ಬಿಜೆಪಿ ಸಂಸದರು, ಶಾಸಕರಲ್ಲಿ ಮತಯಾಚನೆ!

By

Published : Jul 9, 2022, 11:01 PM IST

ಬೆಂಗಳೂರು: ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮತ್ತು ಸಚಿವರು ಅವರನ್ನು ಸ್ವಾಗತಿಸಲಿದ್ದಾರೆ.

ಬಳಿಕ ಸಂಜೆ 4 ಗಂಟೆಗೆ ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‍ನಲ್ಲಿ ನಡೆಯುವ ಸಂಸದರು, ಸಚಿವರು ಮತ್ತು ಶಾಸಕರ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಅಲ್ಲಿ ಮತಯಾಚನೆ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ಪ್ರಲ್ಹಾದ ಜೋಶಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅದ್ದೂರಿ ಸ್ವಾಗತಕ್ಕೆ ಸಿದ್ಧತೆ:ದ್ರೌಪದಿ ಮುರ್ಮು ಅವರು ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಕೋಲಾಟ ಸೇರಿದಂತೆ 20 ಆದಿವಾಸಿ ಕಲಾತಂಡಗಳಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ನಿರ್ಣಯಿಸಲಾಗಿದೆ.

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ 2,500 ಮಹಿಳೆಯರು ಶಾಂಘ್ರಿಲಾ ಹೋಟೆಲ್ ಬಳಿ ಸೇರಿ ಅವರನ್ನು ಸ್ವಾಗತಿಸಲು ನಿರ್ಧರಿಸಲಾಗಿದೆ.

ABOUT THE AUTHOR

...view details