ಕರ್ನಾಟಕ

karnataka

ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ: ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ: ಜಿ.ಪರಮೇಶ್ವರ್

By

Published : Jul 6, 2023, 9:52 PM IST

ವಿಧಾನಸಭೆಯಲ್ಲಿ ನಾಗಮಂಗಲ ಕೆಎಸ್ಆರ್ ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಚರ್ಚೆ ನಡೆಸಲಾಯಿತು.

Etv Bharat
Etv Bharat

ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆಗೆ ಆದೇಶ

ಬೆಂಗಳೂರು : ನಾಗಮಂಗಲ ಕೆಎಸ್ಆರ್​ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ನಾಗಮಂಗಲ ಕೆಎಸ್ಆರ್ ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಉತ್ತರ ನೀಡಿದ ಅವರು, ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಈ ಪ್ರಕರಣ ಸಂಬಂಧ ಬಹಳ ಗಂಭೀರವಾಗಿ ಚರ್ಚೆ ಮಾಡಿದರು.

ಆದರೇ ನಾನು ಗಮನಿಸಿದ್ದು, ಹೆಚ್​.ಡಿ ಕುಮಾರಸ್ವಾಮಿ ಎರಡು ಭಾರಿ ಮುಖ್ಯಮಂತ್ರಿ ಆಗಿ ಅನುಭವ ಇರುವವರು, ಅದೇ ರೀತಿಯಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಜೊತೆಯಲ್ಲಿ ಕೆಲಸ ಮಾಡಿದ್ದಂತಹವರು. ಒಂದು ಇತಿ ಮಿತಿಯಲ್ಲಿ ಚರ್ಚೆ ನಡೆದರೆ ಸದನಕ್ಕೆ ಗೌರವ ಬರುತ್ತೆ. ಇಂದು ನಡೆದಿದ್ದು ಎರಡೂ ಕಡೆಯಿಂದ ಸ್ವಲ್ಪ ಅತಿಯಾಯಿತು ಅನ್ನಿಸಿತು.‌ ಅದು‌ ಮರುಕಳಿಸಬಾರದು ಎಂದು ಮನವಿ ಮಾಡಿದರು. ಈ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸುತ್ತೇವೆ. ಕೆಎಸ್ಆರ್​ಟಿಸಿ ಇಲಾಖೆ ಹಿರಿಯ ಅಧಿಕಾರಿಗಳನ್ನು ಒಳಗೊಂಡು ತನಿಖೆ ನಡೆಸಿ ವರದಿ ತರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ಧರಣಿ :ಇದಕ್ಕೂ ಮುನ್ನ ಪ್ರಕರಣ ಸಂಬಂಧ ಸರ್ಕಾರದಿಂದ ಸೂಕ್ತ ಉತ್ತರ ಬಂದಿಲ್ಲ ಎಂದು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಸದನದ ಭಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಗದೀಶ್ ಡ್ರೈವರ್ ಕಮ್‌ ಕಂಡಕ್ಟರ್ ಆಗಿದ್ದಾರೆ. ನಿಗಮದ ಸಿಬ್ಬಂದಿಯನ್ನು ಕೋರಿಕೆ ಮೇಲೆ ಮಾತ್ರ ವರ್ಗಾವಣೆ ಮಾಡುತ್ತೇವೆ. ಉದ್ದೇಶ ಪೂರ್ವಕವಾಗಿ ಏನು ಮಾಡಿಲ್ಲ. ಆಡಳಿತಾತ್ಮಕ ವಿಚಾರಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸುತ್ತೇನೆ. ಅಧಿಕಾರಿಗಳದ್ದು ತಪ್ಪು ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಪ್ರಕರಣ ಸಂಬಂಧ ಎಫ್ಐಆರ್ ಕೂಡ ಮಾಡಿಲ್ಲ. ಘಟನೆ ನಡೆದು 34 ತಾಸು ಆಗಿದ್ದು, ಇನ್ನೂ ಎಫ್ಐಆರ್ ಮಾಡಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಆಗಿದೆ. ಸರ್ಕಾರದ ಉತ್ತರ ಸಮರ್ಪಕವಾಗಿಲ್ಲ. ಹಾಗಾಗಿ ನಾವು ಧರಣಿ ಮಾಡುತ್ತೇವೆ ಎಂದು ಬಿಜೆಪಿ ಸದಸ್ಯರೂ ಭಾವಿಗಿಳಿದು ಧರಣಿ ನಡೆಸಿದರು.

ಬಳಿಕ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.‌ ಸ್ಪೀಕರ್ ಕಚೇರಿಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ನಡುವೆ ಸಂಧಾನ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಧರಣಿ ಕೈಬಿಡಲು ನಿರ್ಧರಿಸಿದರು. ಕಲಾಪ ಪುನಾರಂಭವಾದ ಬಳಿಕ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ ಅವರು, ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ಗೃಹಸಚಿವರು ತ‌ನಿಖೆ ನಡೆಸಬೇಕು. ಚಾಲಕನ ಬಡ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ :ವಿಧಾನಸಭೆಯಲ್ಲಿ ಕುಮಾರಸ್ವಾಮಿ vs ಸಿಎಂ ಸಿದ್ದರಾಮಯ್ಯ ಟಾಕ್​​ಫೈಟ್​

ABOUT THE AUTHOR

...view details