ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳಿಂದ ಕೈಗೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಅವಾಂತರ ನಡೆದಿದೆ.
ಪ್ರತಿಭಟನಾ ಮೆರವಣಿಗೆ ವೇಳೆ ಡಿಸಿಪಿ ಕಾಲಿನ ಮೇಲೆನೇ ಕಾರು ಹತ್ತಿಸಿದ ಚಾಲಕ.. ಮುಂದೇನಾಯ್ತು! - ಬೆಂಗಳೂರು ಪ್ರತಿಭಟನೆ ವೇಳೆ ಅಪಘಾತ
ಮೆರವಣಿಗೆ ವೇಳೆ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಬಂದೋಬಸ್ತ್ನಲ್ಲಿ ಇರುವಾಗ ಅವರ ಕಾಲಿನ ಮೇಲೆ ಕಾರು ಹತ್ತಿಸಿ ಚಾಲಕ ಅಚಾತುರ್ಯ ಮೆರೆದಿದ್ದಾನೆ.
ಡಿಸಿಪಿ ಕಾಲಿನ ಕಾರು ಹತ್ತಿಸಿದ ಚಾಲಕ
ಮೆರವಣಿಗೆ ವೇಳೆ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಬಂದೋಬಸ್ತ್ನಲ್ಲಿ ಇರುವಾಗ ಅವರ ಕಾಲಿನ ಮೇಲೆ ಕಾರು ಹತ್ತಿಸಿ ಚಾಲಕ ಅಚಾತುರ್ಯ ಮೆರೆದಿದ್ದಾನೆ.
ಗೋರಗುಂಟೆಪಾಳ್ಯ ಬಳಿ ಮೆರವಣಿಗೆ ಜಾಥಾ ನಡೆಯುತ್ತಿತ್ತು. ಈ ವೇಳೆ, ಪ್ರತಿಭಟನಾಕಾರರ ನಡುವೆ ನಡೆದುಕೊಂಡು ಬರುವಾಗ ಜನಸಂದಣಿಯಲ್ಲಿ ಕನ್ನಡ ಪರ ಹೋರಾಟಗಾರ ಗಿರೀಶ್ ಗೌಡ ಕಾರಿನ ಚಾಲಕ ಕೃತ್ಯವೆಸಗಿದ್ದಾನೆ. ಈ ಸಂಬಂಧ ಯಶವಂತಪುರ ಸಂಚಾರಿ ಪೊಲೀಸರು ಚಾಲಕ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Last Updated : Sep 27, 2021, 12:43 PM IST