ಬೆಂಗಳೂರು: ಫೀನಿಕ್ಸ್ ಮಾರ್ಕೆಟ್ಸ್ ಹೊಸದಾಗಿ ಹಾಗೂ ವಿಶೇಷವಾಗಿ ಸ್ಥಾಪಿಸಿರುವ ದಿ ರಾಯಲ್ ಗ್ರಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌ಗೆ ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಈ ಆಭರಣ ಪ್ರದರ್ಶನದಲ್ಲಿ ವಿವಿಧ ಬಗೆಯ ಚಿನ್ನಾಭರಣಗಳನ್ನು ಇಡಲಾಗಿದೆ.
ದಿ ರಾಯಲ್ ಗ್ರ್ಯಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌ಗೆ ಯದುವೀರ್ ಚಾಲನೆ - Jewelry Exhibition in Bangalore news
ಫೀನಿಕ್ಸ್ ಮಾರ್ಕೆಟ್ಸ್ ಬೆಂಗಳೂರು ಹೊಸದಾಗಿ ಹಾಗೂ ವಿಶೇಷವಾಗಿ ಸ್ಥಾಪಿಸಿರುವ ದಿ ರಾಯಲ್ ಗ್ರ್ಯಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌ಗೆ ಮೈಸೂರು ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.

ದಿ ರಾಯಲ್ ಗ್ರಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌ಗೆ ಚಾಲನೆ
ದಿ ರಾಯಲ್ ಗ್ರ್ಯಾಂಡ್ ಕ್ರಿಸ್ಟಲ್ ಲೋಟಸ್ ಡೋಮ್‌ಗೆ ಚಾಲನೆ
ವಜ್ರಗಳ ಶ್ರೇಷ್ಠತೆ, ವೈಭವ ಹಾಗೂ ಶುಭ ಸಂಕೇತವನ್ನೇ ಕೇಂದ್ರಿಕರಿಸಿಕೊಂಡು ರೂಪಿಸಲಾಗಿರುವ ದಿ ರಾಯಲ್ ಗ್ರ್ಯಾಂಡ್ ಕ್ರಿಸ್ಟಲ್ ಲೋಟಸ್ ಡೋಮ್ ಅನ್ನು ಹಬ್ಬದ ಸಾಂಕೇತಿಕ ಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
ತನಿಷ್ಕ್, ಮಿಯಾ, ಕ್ಯಾರಟ್ಲೇನ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್, ಟಿಬಿಝಡ್, ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್, ಜೋಯಾಲುಕ್ಕಾಸ್, ಭೀಮ ಜ್ಯುವೆಲ್ಲರ್ಸ್, ಉನ್ನಿಯರ್ಚ, ಐಶರ್ಯ ಸೇರಿದಂತೆ ವಿವಿಧ ಕಂಪನಿಗಳು ವಿಶೇಷವಾಗಿ ಹಬ್ಬಕ್ಕೆಂದು ವಿನ್ಯಾಸಗೊಳಿಸಲಾಗಿರುವ ಆಭರಣಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.