ಕರ್ನಾಟಕ

karnataka

ETV Bharat / state

ಉಚಿತ ಔಷಧ ಪೂರೈಕೆ ಸೇವೆಗೆ ಚಾಲನೆ ನೀಡಿದ ಬಿಬಿಎಂಪಿ ಮೇಯರ್ - BBMP

ಕೂಲಿ‌ ಕಾರ್ಮಿಕರಿಗೆ, ಆಟೋ, ಕ್ಯಾಬ್ ಚಾಲಕರಿಗೆ ಹಾಗೂ ಬಡವರಿಗೆ ಸೀಮಿತವಾಗಿರುವ ಉಚಿತ ಮೆಡಿಸಿನ್ ಡೆಲಿವರಿ ಸೇವೆಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಬಿಬಿಎಂಪಿ ಕಛೇರಿಯಲ್ಲಿ ಚಾಲನೆ ನೀಡಿದ್ದಾರೆ.

Free Medicine Service
ಫ್ರೀ ಮೆಡಿಸಿನ್ ಸೇವೆಗೆ ಚಾಲನೆ

By

Published : May 5, 2020, 11:26 AM IST

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಉಚಿತ ಮೆಡಿಸಿನ್ ಡೆಲಿವರಿ ಸೇವೆ ಆರಂಭಿಸುತ್ತಿದ್ದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಚಾಲನೆ ನೀಡಿದ್ದಾರೆ.

ಫ್ರೀ ಮೆಡಿಸಿನ್ ಸೇವೆಗೆ ಚಾಲನೆ

ಈ ಉಚಿತ ಸೇವೆ ಕೂಲಿ‌ ಕಾರ್ಮಿಕರಿಗೆ, ಆಟೋ, ಕ್ಯಾಬ್ ಚಾಲಕರಿಗೆ ಹಾಗೂ ಬಡವರಿಗೆ ಸೀಮಿತವಾಗಿದೆ. ವಾಟ್ಸ್‌ ಆ್ಯಪ್​ನಲ್ಲಿ ಒಂದು ಮೆಸೇಜ್ ಮಾಡಿದರೆ ಸಾಕು, ಗಂಟೆಯೊಳಗೆ ಔಷಧಿ ಮನೆ ಸೇರಲಿದೆ. ಲಾಕ್​​ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಮೆಡಿಸಿನ್ ಕೊಳ್ಳಲು ಸಾಕಷ್ಟು ಸಮಸ್ಯೆಯಾಗ್ತಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಅಸೋಸಿಯೇಷನ್ ಬಡವರಿಗಾಗಿ ಉಚಿತ ಮೆಡಿಸಿನ್ ನೀಡಲು ಮುಂದಾಗಿದ್ದಾರೆ.

ಈ ಸೇವೆ ಆರಂಭವಾಗಲಿದ್ದು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್​ನಲ್ಲಿರುವ ಸಾರ್ವಜನಿಕರಿಗೆ ಮಾತ್ರ ಈ ಸೇವೆ ಸಿಗಲಿದೆ. ವೈದ್ಯರು ನೀಡಿರುವ ಔಷಧಿ ಚೀಟಿಯನ್ನು ಫೋಟೋ ತೆಗೆದು 9980138530 ಈ ನಂಬರ್​​ಗೆ ಕಳುಹಿಸಿದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಉಚಿತ ಮೆಡಿಸಿನ್​​ ತಲುಪಿಸಲಿದ್ದಾರೆ.

ABOUT THE AUTHOR

...view details