ಕರ್ನಾಟಕ

karnataka

ETV Bharat / state

ಕೆ ಆರ್​ ಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ.. ಸಚಿವರಿಗೆ ಬಡಾವಣೆ ನಿವಾಸಿಗಳಿಂದ ಮುತ್ತಿಗೆ - ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ

ಕೆ ಆರ್ ಪುರ ಕ್ಷೇತ್ರ ವ್ಯಾಪ್ತಿಯ ಬಸವನಪುರ ವಾರ್ಡ್​ನಲ್ಲಿ ಇಂದು ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್ ಅವರು ಸುಮಾರು 41 ಕೋಟಿ ರೂ ವೆಚ್ಚದಲ್ಲಿ ಬಸವನಪುರ ವಾರ್ಡ್ ಒಂದರಲ್ಲೇ 9 ವಿವಿಧ ಭಾಗದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸಚಿವರಿಗೆ ಬಡಾವಣೆಯ ನಿವಾಸಿಗಳು ಮುತ್ತಿಗೆ ಹಾಕಿರುವುದು
ಸಚಿವರಿಗೆ ಬಡಾವಣೆಯ ನಿವಾಸಿಗಳು ಮುತ್ತಿಗೆ ಹಾಕಿರುವುದು

By

Published : Nov 29, 2022, 4:40 PM IST

ಕೆ ಆರ್ ಪುರ( ಬೆಂಗಳೂರು) :ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ನಗರದಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ. ಅದರಲ್ಲೂ ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಕೆ ಆರ್ ಪುರದಲ್ಲಿ ಕುಡಿಯಲು ನೀರಿಲ್ಲದೆ ಸಾರ್ವಜನಿಕರು ಹೈರಾಣಾಗಿದ್ದಾರೆ.

ಕೆ ಆರ್ ಪುರ ಕ್ಷೇತ್ರ ವ್ಯಾಪ್ತಿಯ ಬಸವನಪುರ ವಾರ್ಡ್​ನಲ್ಲಿ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಸುಮಾರು 41 ಕೋಟಿ ರೂ ವೆಚ್ಚದಲ್ಲಿ ಬಸವನಪುರ ವಾರ್ಡ್ ಒಂದರಲ್ಲೇ 9 ವಿವಿಧ ಭಾಗದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದರು.

ಈ ವೇಳೆ ಎಲ್ಲಾ ಕಡೆ ಬಡಾವಣೆಯ ನಿವಾಸಿಗಳು ಕುಡಿಯುವ ನೀರು ಮತ್ತು ಹದಗೆಟ್ಟ ‌ರಸ್ತೆಗಳ ಬಗ್ಗೆ ಸಾಕಷ್ಟು ‌ದೂರುಗಳು ಬಂದಿದ್ದವು. ಲಕ್ಷ್ಮಿಪುರ ಬಡಾವಣೆಗೆ ಆಗಮಿಸಿದಂತೆ ಸಚಿವ ಭೈರತಿ ಬಸವರಾಜ್​ ಅವರನ್ನು ಸುತ್ತುವರೆದ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಲ್ಲ, ದಿನಬಳಕೆಗೆ ನೀರಿಲ್ಲದೆ ಮೂರು ದಿನಗಳಿಗೊಮ್ಮೆ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಇಂದು ಬಸವನಪುರ ವಾರ್ಡ್​ಗೆ ಬಂದು ಜನರ ಸಂಕಷ್ಟ ಆಲಿಸಿದರು

ಇಂಜಿನಿಯರ್ ಮೇಲೆ ಅಧಿಕಾರಿ ಕೆಂಡಾಮಂಡಲ: ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆ ಅಧಿಕಾರಿಗಳನ್ನು ಸಚಿವ ಭೈರತಿ ಬಸವರಾಜ್​ ಪ್ರಶ್ನಿಸಿದ್ದಾರೆ. ಆಗ ಬಸವನಪುರ ವಾರ್ಡ್ ಇಂಜಿನಿಯರ್​ ಕೇಶವ್ ಸಮಸ್ಯೆ ಬಗ್ಗೆ ಉತ್ತರಿಸದೇ ಈಗ ಬೇಡ ಸಾರ್, ಪರ್ಸ್​ನಲ್​ ಆಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಸುತ್ತಲೂ ಸಾರ್ವಜನಿಕರು ಇರುವ ವೇಳೆ ಅಧಿಕಾರಿ ಉತ್ತರಿಸಿದ ಪರಿ ನೋಡಿ ಸಚಿವ ಭೈರತಿ ಅವರು ಕೆಂಡಾಮಂಡಲರಾಗಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಏನೇ ಇರ್ಲಿ ಇಲ್ಲೇ ಹೇಳು. ಏನು ಪರ್ಸ್​ನಲ್​ ಆಗಿ ಮಾತಾಡೋದು ಎಂದು ಕಿಡಿಕಾರಿದರು.

ಜನರ ಮುಂದೆ ನಿಂತುಕೊಳ್ಳಲು ಮರ್ಯಾದೆ ಹೋಗುತ್ತಿದೆ: ಬೆಳಗಿನಿಂದ ಬಸವನಪುರ ವಾರ್ಡ್ ವ್ಯಾಪ್ತಿಯಲ್ಲಿ ಎಲ್ಲೂ‌ ಹೋದರೂ ನೀರಿನ ಸಮಸ್ಯೆ ಕೇಳಿ ಬರ್ತಿದೆ. ವಾರ್ಡ್​ನಲ್ಲಿ ಏನೂ ಮಾಡುತ್ತಿದ್ದಿರ...? ನನಗೆ ಅವರ ಮುಂದೆ ನಿಂತುಕೊಳ್ಳಲು ಮರ್ಯಾದೆ ಹೋಗುತ್ತಿದೆ. ಕಳೆದ 14 ವರ್ಷಗಳಿಂದ ಯಾವತ್ತು ನೀರಿಗಾಗಿ ಜನ ನನ್ನನ್ನು ಪ್ರಶ್ನೆ ಮಾಡಿಲ್ಲ. ನಾನು ಈಗ ಹೇಗೆ ಉತ್ತರ ಕೊಡಲಿ ಎಂದು ಪ್ರಶ್ನಿಸಿದರು.

ಸಚಿವ ಭೈರತಿ ಬಸವರಾಜ್ ಅವರಿಗೆ ಮುಜುಗರ:ಯಾಕೆ ನೀರಿನ ಸಮಸ್ಯೆ ಆಗಿದೆ. ಇನ್ನೂ ಪರಿಹರಿಸದೇ ಏನೂ ಮಾಡುತ್ತಿದ್ದಿರಾ. ಎರಡು ಮೂರು ದಿನಗಳಲ್ಲಿ ನೀರಿನ ಸಮಸ್ಯೆ ಸರಿಪಡಿಸದಿದ್ದರೆ ನಾನು ಸುಮ್ಮನಿರುವುದಿಲ್ಲ. ಒಂದು ವಾರದ ನಂತರ ಮತ್ತೆ ಈ ಭಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆಯನ್ನು ಸಾರ್ವಜನಿಕರು ಎದುರಿಸುವಂತಾಗಿದೆ. ಸಮಸ್ಯೆ ಬಗ್ಗೆ ಪ್ರಶ್ನಿಸಿದರೇ ಸಚಿವರಿಗೆ ಸಾರ್ವಜನಿಕವಾಗಿ ಪರ್ಸ್​ನಲ್​ ಆಗಿ ಮಾತನಾಡುತ್ತೇನೆ ಎಂದು ಉತ್ತರಿಸಿದ್ದು, ಸಚಿವ ಭೈರತಿ ಬಸವರಾಜ್ ಅವರಿಗೆ ಮುಜುಗರ ತರಿಸಿದೆ.

ಓದಿ:ಕುಡಿಯುವ ನೀರಿಗಾಗಿ ಆಗ್ರಹ: ಮರಿಯಮ್ಮನಹಳ್ಳಿ ಪಟ್ಟಣ ಬಂದ್​ ಮಾಡಿ ಬಿಸಿ ಮುಟ್ಟಿಸಿದ ಜನ

ABOUT THE AUTHOR

...view details