ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಕೈಗಾರಿಕಾ ಪ್ರದೇಶದ ನಾಲ್ಕನೇ ಹಂತದ ಪ್ರದೇಶ ಅವ್ವೇರಹಳ್ಳಿ ಬಳಿ ಪಂಚಾಯ್ತಿ ಅನುಮತಿ ಪಡೆಯದೇ ಬೋರ್ವೆಲ್ ಕೊರೆಸುತ್ತಿದ್ದ ಕಂಪನಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಅನುಮತಿ ಇಲ್ಲದೇ ಬೋರ್ವೆಲ್ ಕೊರೆಯಲು ಮುಂದಾದ ಕಂಪನಿ :ಗ್ರಾಮಸ್ಥರ ಆಕ್ರೋಶ - kannadanews
ಅನುಮತಿ ಪಡೆಯದೇ ಕೈಗಾರಿಕಾ ವಲಯದಲ್ಲಿ ಬೋರ್ವೆಲ್ ಕೊರೆಸುತ್ತಿದ್ದ ಕಂಪನಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನೆಲಮಂಗಲ ಹೊರವಲಯದಲ್ಲಿ ನಡೆದಿದೆ.
ಬೋರ್ವೆಲ್ ಕೊರೆದು ಇಲ್ಲಿನ ಗ್ರಾಮಸ್ಥರ ನೀರಿನ ಮೂಲಕ್ಕೆ ಕಂಪನಿ ಕನ್ನ ಹಾಕಲು ಪ್ರಯತ್ನಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಾಗಲೇ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು ಅಂತರ್ಜಲದ ನೀರಿನ ಅತಿಯಾದ ಬಳಕೆ ಮಾಡುತ್ತಿವೆ. ಇದರಿಂದ ಸುತ್ತುಮುತ್ತಲಿನ ಗ್ರಾಮಸ್ಥರು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ರು. ಕೆಐಎಡಿಬಿ ಆಕ್ರಮಿತ ಪ್ರದೇಶದಲ್ಲಿ ಬೋರ್ ವೆಲ್ ಕೊರೆಯುತ್ತಿದ್ದ ಭಗವತಿ ಕಂಪನಿ ವಿರುದ್ಧ ಜನರು ರೊಚ್ಚಿಗೆದ್ದು ಪ್ರತಿರೋಧ ಒಡ್ಡಿದ್ರು. ಸ್ಥಳಕ್ಕೆ ಡಾಬಸ್ ಪೇಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಭೇಟಿ ನೀಡಿ ರೈತರನ್ನು ಮನವೊಲಿಸಿ, ಯಾವ ಇಲಾಖೆಯಲ್ಲಿ ಲೋಪದೋಷ ವಾಗಿದೇಯೋ ಅಲ್ಲಿ ಹೋಗಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಆಸ್ತಿ - ಪಾಸ್ತಿ ತೊಂದರೆಯಾದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಹೀಗೆ ನಿಯಮ ಮೀರಿ ಬೋರ್ ವೆಲ್ ಕೊರೆದರೆ ಅಂತಹ ಕಂಪನಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ರು.