ಬೆಂಗಳೂರು:ಆನ್‌ಲೈನ್ ಜೂಜನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದ ನಂತರವೂ ಡ್ರೀಮ್ 11 ಸಂಸ್ಥೆ ಇನ್ನು ಕಾರ್ಯ ನಿರ್ವಹಿಸುತ್ತಿದೆ ಎಂದು ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡ್ರೀಮ್ 11 ಸಂಸ್ಥೆ ತನ್ನ ಸೇವೆ ಸ್ಥಗಿತಗೊಳಿಸಿದೆ.
ಆನ್‌ಲೈನ್ ಜೂಜು ನಿಷೇಧ: ರಾಜ್ಯದಲ್ಲಿ ಡ್ರೀಮ್ 11 ಸೇವೆ ಸ್ಥಗಿತ - ರಾಜ್ಯದಲ್ಲಿ ಡ್ರೀಮ್ 11 ಸೇವೆ ಸ್ಥಗಿತ
ರಾಜ್ಯದಲ್ಲಿ ಆನ್‌ಲೈನ್ ಜೂಜಾಟ, ಸ್ಕಿಲ್ ಗೇಮ್, ಬೆಟ್ಟಿಂಗ್‌ಗೆ ನಿಷೇಧ ಹೇರಿ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರಕಾರ ಕಾರ್ಯಾಚರಣೆ ಆರಂಭಿಸಿದೆ. ಜನಪ್ರಿಯ ಗೇಮಿಂಗ್ ಆ್ಯಪ್ ಡ್ರೀಮ್ 11 ತನ್ನ ಸೇವೆ ಸ್ಥಗಿತಗೊಳಿಸಿದೆ.
ಡ್ರೀಮ್ 11 ಸೇವೆ ಸ್ಥಗಿತ
ಇಂದು ಬೆಳಗ್ಗೆ ರಾಜ್ಯದ ಎಲ್ಲ ಡ್ರೀಮ್ 11 ಚಂದಾದಾರರಿಗೆ ಇ-ಮೇಲ್ ಮೂಲಕ ರಾಜ್ಯ ಪೊಲೀಸ್ ಕಾನೂನು ಆನ್‌ಲೈನ್ ಬೆಟ್ಟಿಂಗ್ ಅನ್ನು ರಾಜ್ಯದಲ್ಲಿ ನಿಷೇಧಗೊಳಿಸಿದೆ. ಇದಕ್ಕೆ ಇತರ ನ್ಯಾಯಾಲಯಗಳು ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ ಫಾರ್ಮ್ ಒಪ್ಪಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ಗಳು ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮುಂದಾಗುತ್ತಿದೆ. ಆದರೆ, ರಾಜ್ಯ ಸರ್ಕಾರದ ನಿಷೇಧಾಜ್ಞೆ ಕುರಿತು ನ್ಯಾಯಾಲಯಕ್ಕೆ ಮೊರೆ ಹೋಗಲು ಬಹುತೇಕ ಬೆಟ್ಟಿಂಗ್ ಸಂಸ್ಥೆಗಳು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.