ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಯೂನಿಟ್ (ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಆರೈಕೆ ಘಟಕ) 25 ವರ್ಷ ಪೂರೈಸಿದೆ. ಅಲ್ಲದೇ, ಇದುವರೆಗೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದು ಜಯನಗರ ಮಣಿಪಾಲ್ ಹಾಸ್ಪಿಟಲ್ಸ್‌ನ ಗಂಭೀರ ಸ್ಥಿತಿಯ ರೋಗಿಗಳ ಆರೈಕೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸುನಿಲ್ ಕಾರಂತ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲ್‌ದಾಸ್, ಈ 25 ವರ್ಷದಲ್ಲಿ ಅನೇಕ ಬೆಳವಣಿಗೆಗಳು ಐಸಿಯು ಘಟಕದಲ್ಲಿ ಆಗಿದ್ದು, ಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಮರ್ಪಿತ ತಂಡವು 35,000 ಕ್ಕೂ ಹೆಚ್ಚು ರೋಗಿಗಳಿಗೆ ದಣಿವಿಲ್ಲದೇ ಸೇವೆ ಸಲ್ಲಿಸಿದೆ.
25 ವರ್ಷಗಳಲ್ಲಿ ವಿಭಾಗವು ಸಣ್ಣ 11 ಹಾಸಿಗೆಯ ಘಟಕದಿಂದ 4 ವಲಯಗಳ 50 ಹಾಸಿಗೆಯ ಘಟಕವಾಗಿ ಬೆಳೆದಿದೆ. ತೀವ್ರ ರೀತಿಯಲ್ಲಿ ಅಸ್ವಸ್ಥರಾಗಿರುವ ರೋಗಿಗಳನ್ನು ತಲುಪುವ ಸೇವೆಗಳನ್ನು ಪೂರೈಸುವ ಕ್ರಮವನ್ನು ಈ ತೀವ್ರ ನಿಗಾ ಘಟಕ ವಿಕಾಸಗೊಳಿಸಿದ್ದು, ಅದನ್ನು ಅಳವಡಿಸಿಕೊಂಡಿದೆ.