ಬೆಂಗಳೂರು: ನೈಟ್ ಕರ್ಫ್ಯೂ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ಕಂದಾಯ ಸಚಿವ ಆರ್. ಆಶೋಕ್ ಅವರು ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ ಅಂತ ಹೇಳಿದ್ದಾರಷ್ಟೇ ಎಂದು ನೈಟ್ ಕರ್ಫ್ಯೂ ಗೊಂದಲ ಹೇಳಿಕೆ ವಿಚಾರ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ, ಸದ್ಯಕ್ಕೆ ಲಾಕ್ಡೌನ್ ಮಾಡುವ ಪರಿಸ್ಥಿತಿ ಇಲ್ಲ: ಸಚಿವ ಆರ್.ಅಶೋಕ್
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯುಕೆಯಿಂದ ಬಂದ ಪ್ರಯಾಣಿಕರಲ್ಲಿ 30 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರ ಸಂಪರ್ಕದಲ್ಲಿದ್ದ ಆರು ಜನರಿಗೀಗ ಕೊರೊನಾ ಪಾಸಿಟಿವ್ ಬಂದಿದೆ. ಏಳು ಜನಕ್ಕೆ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ. ಅಷ್ಟೂ ಮಂದಿಗೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ತೆ ಆಗದ 199 ಜನರಲ್ಲಿ 80 ಮಂದಿ ನಮ್ಮ ದೇಶದ ಪ್ರಜೆಗಳಲ್ಲ. ಅವರನ್ನು ಕೂಡಾ ಪತ್ತೆ ಹಚ್ಚಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.