ಬೆಂಗಳೂರು: ಸೋಂಕು ಕಡಿಮೆ ಆಗಬೇಕಾದರೆ ಲಾಕ್ಡೌನ್ ಅನಿವಾರ್ಯ. ಇಲ್ಲದೇ ಹೋದ್ರೆ ಸಾವು-ನೋವು ಜಾಸ್ತಿ ಆಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಮಾಧ್ಯಮಗಳ ಜತೆ ಸದಾಶಿವ ನಗರದ ತಮ್ಮ ನಿವಾಸದೆದುರು ಸಿಎಂ ಸಭೆಗೂ ಮುನ್ನ ಮತನಾಡಿದ ಅವರು, ಆರೋಗ್ಯ ಇಲಾಖೆ ಲಾಕ್ಡೌನ್ ಅನ್ನು ಬಲವಾಗಿ ಪ್ರತಿಪಾದಿಸುತ್ತದೆ. ಸಿಎಂ ಜೊತೆಯೂ ಈ ಬಗ್ಗೆ ಮಾತನಾಡುತ್ತೇನೆ. ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ತಾರೆ ಎಂದರು.