ಕರ್ನಾಟಕ

karnataka

ETV Bharat / state

ಬಿಜೆಪಿಯವರದ್ದು ಗೂಂಡಾಗಿರಿ; ನಮ್ಮ ಶಾಸಕರಿಗೂ ಅವರಿಗೂ ಏನ್‌ ಸಂಬಂಧ: ಸಿದ್ದು ಕಿಡಿ - Vidhana saudha galate

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ಬೆಳವಣಿಗೆಗಳ ಹಿಂದಿದ್ದಾರೆ. ಅವರು ಶಾಸಕರಿಗೆ ಆಮಿಷಯೊಡ್ಡಿ ಇಡಿ, ಐಟಿ, ಸಿಬಿಐ ಮೂಲಕ ಬೆದರಿಕೆ ಹಾಕಿ ಈ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ. ಇದು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡೆ. ನಾವು ಈ ಗೂಂಡಾಗಳಿಗೆ ಹೆದರುವುದಿಲ್ಲ ಎಂದು ಕಿಡಿ ಕಾರಿದ್ರು.

ಸಿದ್ದರಾಮಯ್ಯ

By

Published : Jul 10, 2019, 10:30 PM IST

ಬೆಂಗಳೂರು: ಅತೃಪ್ತ ಶಾಸಕ ಡಾ.ಸುಧಾಕರ್ ಅವರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ಅವರು ನಮ್ಮ ಸ್ನೇಹಿತ. ನಮ್ಮ ಹಿತೈಷಿ. ನಮ್ಮ ಶಾಸಕ ಎಂದು ಮಾಜಿ ಸಿದ್ದರಾಮಯ್ಯ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಡಾ.ಸುಧಾಕರ್ ಮನವೊಲಿಕೆ ಬಳಿಕ ಮಾತನಾಡಿದ ಅವರು, ಯಾರೂ ಸುಧಾಕರ್‌ಗೆ ಹಲ್ಲೆ ಮಾಡಿಲ್ಲ. ಗೂಂಡಾಗಿರಿ ಮಾಡಿರುವುದು ಬಿಜೆಪಿ. ನಮ್ಮ‌ ಶಾಸಕ ಸುಧಾಕರ್, ಅವರನ್ನು ನಮ್ಮ‌ ನಾಯಕರು‌ ಕರೆದು‌ಕೊಂಡು ಬಂದಿದ್ದಾರೆ. ಬಿಜೆಪಿಗೂ ಅವರಿಗೂ ಸಂಬಂಧ ಏನು? ಅವರು ಬಿಜೆಪಿ ಶಾಸಕ ಅಲ್ಲ. ಅವರು ಕೇವಲ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಂಗೀಕಾರ ಆಗುವ ತನಕ ಅವರು ನಮ್ಮ ಪಕ್ಷದ ಶಾಸಕ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಾನು ಅವರನ್ನು ಮನವೊಲಿಸಲು ಯತ್ನಿಸಿದೆ. ಬಿಜೆಪಿ ಶಾಸಕರು ರೌಡಿಗಳು. ಅದನ್ನು ನಾನು ಖಂಡಿಸುತ್ತೇನೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಬಿಜೆಪಿ ನಾಯಕರು ಗೂಂಡಾಗಳಾಗಿ ವರ್ತಿಸಿದರು. ಕಾಂಗ್ರೆಸ್ ನಾಯಕರು ಗೂಂಡಾಗಳಾಗಿ ವರ್ತಿಸಿಲ್ಲ. ಬಿಜೆಪಿ ಈ ರಾಜೀನಾಮೆ ಹಿಂದೆ ಇದೆ.‌ ಇವತ್ತಿನ ಘಟನೆ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

For All Latest Updates

ABOUT THE AUTHOR

...view details