ಕರ್ನಾಟಕ

karnataka

ETV Bharat / state

Ram Madhav: ಏಕರೂಪ ನಾಗರಿಕ ಸಂಹಿತೆ ಜಾರಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯವಾಗಿತ್ತು: ಡಾ. ರಾಮ್ ಮಾಧವ್ - National Swayamsevak Sangh

Ram Madhav on UCC: ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಯಾವುದೇ ಧರ್ಮಕ್ಕೆ ವ್ಯತಿರಿಕ್ತ ಪರಿಣಾಮ ಬಿರುವುದಿಲ್ಲ ಎಂದು ಡಾ.ರಾಮ್ ಮಾಧವ್ ಹೇಳಿದರು.

dr-ram-madhav-reaction-on-uniform-civil-code
ಏಕರೂಪ ನಾಗರಿಕ ಸಂಹಿತೆ ಜಾರಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು: ಡಾ.ರಾಮ್ ಮಾಧವ್

By

Published : Jul 30, 2023, 11:02 PM IST

ಬೆಂಗಳೂರು:ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂಬುದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಡಾ. ರಾಮ್ ಮಾಧವ್ ಹೇಳಿದರು. ಮಂಥನ ಬೆಂಗಳೂರು ವತಿಯಿಂದ ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಷನ್‌ನಲ್ಲಿ ಹಮ್ಮಿಕೊಂಡಿದ್ದ ಏಕರೂಪ ನಾಗರೀಕ ಸಂಹಿತೆ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ 44ನೇ ಪರಿಚ್ಛೇದದ ಅನುಸಾರ ಯುಸಿಸಿಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಯಾವುದೇ ಧರ್ಮಕ್ಕೆ ವ್ಯತಿರಿಕ್ತ ಪರಿಣಾಮ ಬಿರುವುದಿಲ್ಲ ಎಂದರು.

ಭಾರತದ ಮುಸ್ಲಿಂ ಸಮುದಾಯಗಳಲ್ಲಿ 3 ಬಾರಿ ತಲಾಖ್ ಹೇಳಿದರೆ ವಿಚ್ಛೇದನವಾಗಿ ಬಿಡುತ್ತಿತ್ತು. ಆದರೆ ಪಾಕಿಸ್ತಾನ, ಸಿರಿಯಾದಂತ ಮುಸ್ಲಿಂ ದೇಶದಲ್ಲಿ ಈ ಪದ್ಧತಿಯಿಲ್ಲ. ಇಸ್ಲಾಂ ರಾಷ್ಟ್ರಗಳಲ್ಲಿಲ್ಲದ್ದು ನಮ್ಮ ದೇಶದಲ್ಲಿ ಯಾಕೆ ಇರಬೇಕು ಎನ್ನುವ ಕಾರಣಕ್ಕಾಗಿ ತಲಾಖ್‌ ಪದ್ಧತಿಯನ್ನು ಪ್ರಧಾನಿ ನರೇಂದ್ರ ಮೋದಿ ನಿಷೇಧ ಮಾಡಿದರು. ಮುಸ್ಲಿಂ ಹುಡುಗಿಯರಿಗೆ 18 ತುಂಬುತ್ತಲೇ ಮದುವೆ ಮಾಡುತ್ತಿದ್ದರು. ಜತೆಗೆ ಮಕ್ಕಳನ್ನು ಅದೇ ಪ್ರಾಯದಲ್ಲಿ ಹೆರುತ್ತಿದ್ದರು. ಇದರಿಂದ ಅವರ ದೇಹಕ್ಕೂ ತೊಂದರೆಯಾಗುತ್ತಿತ್ತು. ಆ ಕಾರಣಕ್ಕಾಗಿ ಮದುವೆಯಾಗುವ ವಯಸ್ಸನ್ನು 21 ವರ್ಷಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.

ಏಕರೂಪ ನಾಗರಿಕ ಸಂಹಿತೆಯು ವಿವಾಹ, ವಿಚ್ಛೇದನ, ಆಸ್ತಿಹಕ್ಕುಗಳು ಹಾಗೂ ದತ್ತು ಸ್ವೀಕಾರ, ಈ ನಾಲ್ಕು ಪ್ರಮುಖ ವಿಷಯಗಳಿಗೆ ಒತ್ತು ನೀಡಲಿದೆ. ನಾಗರಿಕ ಬದುಕಿನಲ್ಲಿ ಸಮಾನತೆ, ಸ್ತ್ರೀ ಗೌರವವನ್ನು ಎತ್ತಿ ಹಿಡಿಯುವುದು ಸೇರಿದಂತೆ ಸರ್ವರ ಹಿತ ಬಯಸುವ ಆಶಯ ಹೊಂದಿದೆ. ಏಕರೂಪ ನಾಗರಿಕ ಸಂಹಿತೆಯು ಯಾವುದೇ ಮತ ಧರ್ಮಗಳ ಪರ ಅಥವಾ ವಿರೋಧವಾದ ಸಂಹಿತೆಯಲ್ಲ. ಕೆಲವು ಶಕ್ತಿಗಳು ಅಪಪ್ರಚಾರದಲ್ಲಿ ತೊಡಗಿರುವುದರ ಕುರಿತು ಎಚ್ಚರಿಕೆಯಿಂದ ಗಮನಿಸಬೇಕು ಎಂದರು. ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಭಾಗದ ಆರ್‌ಎಸ್‌ಎಸ್ ಸಂಘಚಾಲಕ ದ್ವಾರಕಾನಾಥ್, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾರತ ಅಲಿಪ್ತ ನೀತಿಯಿಂದ ಕಾರ್ಯತಂತ್ರದ ಸ್ವಾಯತ್ತತೆಯ ಎಡೆಗೆ ದಾಪುಗಾಲನ್ನಿರಿಸಿದೆ:ಮತ್ತೊಂದೆಡೆ, ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ರಾಮ್ ಮಾಧವ್ ನಗರದ ಎನ್.ಆರ್. ಕಾಲನಿಯ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಸಂವಾದ ಕೇಂದ್ರ ಬೆಂಗಳೂರು ವತಿಯಿಂದ ಪ್ರಕಟಗೊಂಡ ರೀಇಮ್ಯಾಜಿನಿಂಗ್ ಇಂಡಿಯಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಇಚ್ಛಾಶಕ್ತಿ ಮತ್ತು ನಾಯಕತ್ವದ ಗುಣಗಳನ್ನು ಸಮರ್ಥವಾಗಿ ರೂಢಿಸಿಕೊಂಡಿರುವ ಭಾರತ ಅಲಿಪ್ತ ನೀತಿಯಿಂದ ಕಾರ್ಯತಂತ್ರದ ಸ್ವಾಯತ್ತತೆಯ ಎಡೆಗೆ ದಾಪುಗಾಲನ್ನಿರಿಸಿದೆ ಎಂದು ಹೇಳಿದರು.

ವಿಶ್ವದ ಪ್ರಭಾವಿ ರಾಷ್ಟ್ರವಾಗಬೇಕಾದರೆ ಮೊದಲು ಇಚ್ಛಾಶಕ್ತಿ ಇರಬೇಕು. ಜಾಗತಿಕ ಶಕ್ತಿಯಾಗಬೇಕೆಂಬ ಮಹತ್ವಾಕಾಂಕ್ಷೆಯ ಜೊತೆಗೆ ರಾಷ್ಟ್ರವನ್ನು ಸರಿದಾರಿಯಲ್ಲಿ ಕೊಂಡೊಯ್ಯಬಲ್ಲ ನಾಯಕತ್ವವೂ ಬೇಕು. ಎರಡು ಪ್ರಭಾವಿ ರಾಷ್ಟ್ರಗಳು ಜಗತ್ತಿನ ಮೇಲಿನ ಅಧಿಪತ್ಯ ಇಪ್ಪತ್ತನೇ ಶತಮಾನದ ಅಂತ್ಯಕ್ಕೆ ರಷ್ಯಾದ ವಿಭಜನೆಯೊಂದಿಗೆ ಅಂತ್ಯಗೊಂಡಿತು. ಆಗ ಅಮೆರಿಕ ಜಗತ್ತಿನ ಏಕೈಕ ಜಾಗತಿಕ ಶಕ್ತಿಯಾಗಿ ತಾನಿರಬೇಕೆಂದು ಇಚ್ಛಿಸಿತ್ತು. ಆದರೆ, 21ನೇ ಶತಮಾನದಲ್ಲಿ ಭಾರತ, ಚೀನಾ, ಜಪಾನ್, ಸಿಂಗಾಪುರ ಮುಂತಾದ ರಾಷ್ಟ್ರಗಳ ಅಭಿವೃದ್ಧಿಯ ವೇಗ ಮತ್ತು ಆಸಿಯಾನ್, ಸಾರ್ಕ್, ಯುರೋಪಿಯನ್ ಯೂನಿಯನ್, ಆಫ್ರಿಕನ್ ಯೂನಿಯನ್ ಮುಂತಾದ ಒಕ್ಕೂಟಗಳ ಗಮನಾರ್ಹ ಬೆಳವಣಿಗೆ ಈ ಶತಮಾನವನ್ನು ಭಿನ್ನ ಹಾಗೂ ಬಹು ಕೇಂದ್ರಿತವಾಗಿಸಿದೆ ಎಂದು ತಿಳಿಸಿದರು.

ಪ್ರಸ್ತುತ ಭಾರತ ಜಾಗತಿಕ ಸಂಗತಿಗಳಲ್ಲಿ ತಟಸ್ಥ ನೀತಿಯನ್ನು ಬದಿಗಿಟ್ಟು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಸಮರ್ಥಗೊಳಿಸಿದೆ. ಬಲಿಷ್ಠ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅವುಗಳೆಲ್ಲದರ ಜೊತೆಗೆ ಸ್ಪಷ್ಟವಾದ ನಿಲುವನ್ನು ಪ್ರಕಟಗೊಳಿಸುತ್ತಿದೆ. ಚೀನಾವನ್ನೂ ಒಳಗೊಂಡಂತೆ ತನ್ನ ನೆರೆಹೊರೆಯ ದೇಶಗಳ ಕುತಂತ್ರಗಳಿಗೆ ಸೂಕ್ತ ಉತ್ತರವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ವಿಶ್ವದ ಶೇ.80 ರಷ್ಟು ಜನಸಂಖ್ಯೆ ಮತ್ತು ಶೇ.40 ರಷ್ಟು ಒಟ್ಟು ದೇಶೀಯ ಉತ್ಪನ್ನವನ್ನು ಒಳಗೊಂಡ ಜಾಗತಿಕ ಗ್ಲೋಬಲ್ ಸೌತ್ ನಾಯಕತ್ವವನ್ನು ವಹಿಸಬೇಕೆಂದು ಹಲವು ರಾಷ್ಟ್ರಗಳು ಬಯಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಸ್ತೂರಿ ರಂಗನ್ ವರದಿ ಅನುಷ್ಠಾನದಲ್ಲಿ ಆತುರ ಬೇಡ: ಶಾಸಕ ಸುನೀಲ್ ಕುಮಾರ್

ABOUT THE AUTHOR

...view details