ಬೆಂಗಳೂರು:ದೇಶದ ಏಕೈಕ ಮಾನಸಿಕ ಆರೋಗ್ಯ ಸಂಸ್ಥೆ ನಿಮ್ಹಾನ್ಸ್ ನಿರ್ದೇಶಕರಾಗಿ ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರು, ಪ್ರೊಫೆಸರ್ ಆಗಿರುವ ಡಾ. ಪ್ರತಿಮಾ ಮೂರ್ತಿಯವರನ್ನು ನೇಮಕ ಮಾಡಲಾಗಿದೆ.
ಡಾ. ಪ್ರತಿಮಾ ಮೂರ್ತಿ ಮುಂದಿನ 5 ವರ್ಷಗಳಿಗೆ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ. ನಿನ್ನೆಯಿಂದಲೇ ನಿರ್ದೇಶಕರ ಸ್ಥಾನಕ್ಕೆ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇತ್ತೀಚೆಗಷ್ಟೇ ವಿಶ್ವ ತಂಬಾಕು ದಿನದ ಸಂದರ್ಭದಲ್ಲಿ WHO ನಿಂದ ವಿಶೇಷ ಮಾನ್ಯತೆ ಪ್ರಶಸ್ತಿಯು ಸಹ ಇವರಿಗೆ ಲಭಿಸಿದೆ.
ಇದನ್ನೂ ಓದಿ:ಪ್ರವಾಹ ನಿರ್ವಹಣೆಗಾಗಿ ಸಮನ್ವಯತೆ ಸಾಧಿಸಲು ಉಭಯ ರಾಜ್ಯಗಳು ತೀರ್ಮಾನ: ಸಿಎಂ