ಬೆಂಗಳೂರು: ವಿವಾಹಿತ ಭಾರತೀಯ ಮಹಿಳೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಭಾನುವಾರ ಆಯೋಜಿಸಿದ್ದ ಮಿಸೆಸ್ ಕರ್ನಾಟಕ 2022ರ ಸೌಂದರ್ಯ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಮಿಸಸ್ ಕರ್ನಾಟಕ ಪ್ರಥಮ ಸ್ಥಾನವನ್ನು ಡಾ.ಮೇಘನಾ ರೆಡ್ಡಿ, ದ್ವಿತೀಯ ಸ್ಥಾನ ಬಿಂದಿ ರಮೇಶ್, ತೃತೀಯ ಸ್ಥಾನ ನೌಶೀನ್ ಫರೀಫ್ ಪಡೆದರು.
ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಮತ್ತು ಫೆಮಿನಾ ಮಿಸ್ ಇಂಡಿಯಾ ಪ್ರಾಚಿ ಮಿಶ್ರ, ಗರ್ಭಿಣಿ ಮಹಿಳೆಯರ ಆರೋಗ್ಯ ಸುರಕ್ಷತೆ ತಜ್ಞೆ ಲೀನಾ ಸವೂರ್ ಡಾ ಮಂಜುಶ ಪಾಟೀಲ್, ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಸೌಂದರ್ಯ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತಿಮ ಸುತ್ತಿನಲ್ಲಿ 10 ಮಹಿಳೆಯರು ಆಯ್ಕೆಯಾದರು.
ಮಹಿಳೆ ಅಬಲೆಯಲ್ಲ, ಸಬಲೆ:ಮಹಿಳೆ ಅಬಲೆ ಅಲ್ಲ, ಸಬಲೆ. ಸಮಾಜದ ಅಭಿವೃದ್ದಿಗೆ ಮತ್ತು ಕುಟುಂಬದ ನಿರ್ವಹಣೆಯಲ್ಲಿ ಸಶಕ್ತಳಾಗಿ ದುಡಿಯಬಲ್ಲಳು. ಮಹಿಳೆ ಇಂದು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾಳೆ ಎಂದು ಶೈನ್ ಶೆಟ್ಟಿ ಹೇಳಿದರು.