ಬೆಂಗಳೂರು: ಸದ್ಯದ ಮಟ್ಟಿಗೆ ಮೊದಲ ಹಂತದಲ್ಲಿ ಉಪಚುನಾವಣೆಯಲ್ಲಿ ಜಯ ಗಳಿಸಿರುವ 11 ಜನರಿಗೆ ಮಾತ್ರ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎಂದು ನೂತನ ಶಾಸಕ ಡಾ. ಕೆ. ಸುಧಾಕರ್ ಮಾಹಿತಿ ಹೇಳಿದ್ದಾರೆ.
ಸಚಿವ ಸ್ಥಾನದ ಭರವಸೆ ಇದೆ: ಶಾಸಕ ಡಾ. ಕೆ. ಸುಧಾಕರ್ - Latest News For Sudhakar
ಸದ್ಯದ ಮಟ್ಟಿಗೆ ಮೊದಲ ಹಂತದಲ್ಲಿ ಉಪಚುನಾವಣೆಯಲ್ಲಿ ಜಯ ಗಳಿಸಿರುವ 11 ಜನರಿಗೆ ಮಾತ್ರ ಸಚಿವ ಸ್ಥಾನ ಕೊಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎಂದು ನೂತನ ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಸಚಿವ ಸ್ಥಾನದ ಭರವಸೆ ಇದೆ : ಡಾ.ಕೆ. ಸುಧಾಕರ್
ಸಚಿವ ಸ್ಥಾನದ ಭರವಸೆ ಇದೆ : ಡಾ.ಕೆ. ಸುಧಾಕರ್
ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಸೇರಿದಂತೆ 11 ಜನರಿಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ. ಉಳಿದಿರುವ ನಾಲ್ವರು ಶಾಸಕರ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
150 ದಿನಗಳ ಅಜ್ಞಾತವಾಸ ಮುಗಿಸಿ ಈಗ ಹೊರಬಂದಿದ್ದೇವೆ. ಜಾರ್ಖಂಡ್ನಲ್ಲಿ ಚುನಾವಣೆ ಇರುವುದರಿಂದ ಆ ಚುನಾವಣೆ ಮುಗಿದ ಬಳಿಕ, ಬಳಿಕ ಕ್ಯಾಬಿನೆಟ್ ವಿಸ್ತರಣೆ ಆಗಬಹುದು ಎಂದು ಡಾ. ಸುಧಾಕರ್ ಹೇಳಿದರು.