ಕರ್ನಾಟಕ

karnataka

ETV Bharat / state

ಹೊಸ ಕೋವಿಡ್ ಟಾಸ್ಕ್ ಫೋರ್ಸ್ ರಚಿಸುವ ಅಗತ್ಯ ಇಲ್ಲ : ಸಚಿವ ಡಾ. ಕೆ ಸುಧಾಕರ್ - Dr K Sudhakar statement about covid task force

ನಾನು ಕಾರ್ಯಪಡೆ ಬೇಡ ಅಂತಾ ಹೇಳುತ್ತಿಲ್ಲ.‌ ಈ ಬಗ್ಗೆ ಅಂತಿಮ ನಿರ್ಧಾರ ಸಿಎಂ ತೆಗೆದುಕೊಳ್ಳುತ್ತಾರೆ. ನಾನು ಆ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು. ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಹಿಂದಿನ ಕೋವಿಡ್ ಟಾಸ್ಕ್ ಫೋರ್ಸ್​ ಅನ್ನು ರದ್ದುಪಡಿಸಲಾಗಿತ್ತು. ಹೊಸ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಸಿಎಂ ತಿಳಿಸಿದ್ದರು. ಆದರೆ, ಈವರೆಗೆ ಕಾರ್ಯಪಡೆ ರಚನೆಯಾಗಿಲ್ಲ..

dr-k-sudhakar
ಆರೋಗ್ಯ ಸಚಿವ ಡಾ. ಕೆ ಸುಧಾಕರ್

By

Published : Aug 30, 2021, 7:25 PM IST

ಬೆಂಗಳೂರು :ಕೋವಿಡ್ ಟಾಸ್ಕ್ ಫೋರ್ಸ್ ರಚಿಸುವ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ನೂತನ ಕೋವಿಡ್ ಕಾರ್ಯಪಡೆ ಇನ್ನೂ ರಚನೆಯಾಗದಿರುವ ಬಗ್ಗೆ ವಿಧಾನಸೌಧದಲ್ಲಿ ಅವರು ಮಾತನಾಡಿದರು. ಸಿಎಂ ದಿನನಿತ್ಯ ಕೋವಿಡ್ ನಿರ್ವಹಣೆ ಸಂಬಂಧ ಸಭೆ ನಡೆಸುತ್ತಿದ್ದಾರೆ. ಹೀಗಾಗಿ, ವಿಶೇಷ ಟಾಸ್ಕ್ ಫೋರ್ಸ್ ರಚಿಸುವ ಅವಶ್ಯಕತೆ ಇಲ್ಲ ಎಂದರು.

ಕೋವಿಡ್ ಕುರಿತಂತೆ ಟಾಸ್ಕ್ ಫೋರ್ಸ್ ಬೇಡ ಅಂತಾರೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್..

ಸಿಎಂ ಕೋವಿಡ್ ಸಂಬಂಧಿಸಿದಂತೆ ಪ್ರತಿದಿನ ಸಭೆಗಳನ್ನು ಮಾಡುತ್ತಿದ್ದಾರೆ. ಆ ಸಭೆಯಲ್ಲಿ ಆರೋಗ್ಯ ಸಚಿವನಾಗಿ ನಾನು ಭಾಗಿಯಾಗುತ್ತೇನೆ. ಉಳಿದಂತೆ ಶಿಕ್ಷಣ ಸಚಿವರು, ಕಂದಾಯ ಸಚಿವರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೊಂದು ನಿರಂತರ ಪ್ರಕ್ರಿಯೆ. ಈ ಸಭೆಗಳಲ್ಲೇ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ನಾನು ಕಾರ್ಯಪಡೆ ಬೇಡ ಅಂತಾ ಹೇಳುತ್ತಿಲ್ಲ.‌ ಈ ಬಗ್ಗೆ ಅಂತಿಮ ನಿರ್ಧಾರ ಸಿಎಂ ತೆಗೆದುಕೊಳ್ಳುತ್ತಾರೆ. ನಾನು ಆ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು. ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಹಿಂದಿನ ಕೋವಿಡ್ ಟಾಸ್ಕ್ ಫೋರ್ಸ್​ ಅನ್ನು ರದ್ದುಪಡಿಸಲಾಗಿತ್ತು. ಹೊಸ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಸಿಎಂ ತಿಳಿಸಿದ್ದರು. ಆದರೆ, ಈವರೆಗೆ ಕಾರ್ಯಪಡೆ ರಚನೆಯಾಗಿಲ್ಲ.

ಓದಿ:ಬೆಂಗಳೂರಿನಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ : ಕೋವಿಡ್​ನಿಂದಾಗಿ ಇಳಿಮುಖವಾದ ಭಕ್ತರ ಸಂಖ್ಯೆ

ABOUT THE AUTHOR

...view details