ಬೆಂಗಳೂರು: 3ನೇ ಹಾಗೂ 4ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಮತ್ತೊಂದು ತಾಂತ್ರಿಕ ಸಲಹಾ ಸಮಿತಿ ರಚಿಸುವಂತೆ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸರ್ಕಾರಕ್ಕೆ ಸಲಹೆ ನೀಡಿದ್ದು, ಅದಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಸಿಎಂ ನೇತೃತ್ವದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಅವರು, ಮೂರನೇ ಹಾಗೂ ನಾಲ್ಕನೇ ಅಲೆ ಬರುತ್ತೆ ಅಂತ ತಿಳಿದು, ಆ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಈಗಿನಿಂದಲೇ ಮಾಡಬೇಕು. ಆರೋಗ್ಯ ವ್ಯವಸ್ಥೆ ಸಿದ್ಧಗೊಳಿಸಬೇಕು. ಇದಕ್ಕಾಗಿ ಪರಿಣಿತರನ್ನು ಒಳಗೊಂಡ ಮತ್ತೊಂದು ತಾಂತ್ರಿಕ ಸಲಹಾ ಸಮಿತಿ ರಚಿಸಲು ಸಲಹೆ ನೀಡಿದ್ದಾರೆ. ಇದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
18 ವರ್ಷ ಮೇಲ್ಪಟ್ಟವರಿಗಾಗಿ ಲಸಿಕೆ ಕಾರ್ಯಕ್ರಮದ ಬಗ್ಗೆ ಸರ್ಕಾರದಲ್ಲಿ ಗೊಂದಲ ಇನ್ನೂ ಮುಂದುವರಿದಿದೆ. ಲಸಿಕೆ ಪೂರೈಕೆ ಬಗ್ಗೆ ಸ್ಪಷ್ಟವಾದ ಉತ್ತರ ನೀಡಲು ಆರೋಗ್ಯ ಸಚಿವ ಸುಧಾಕರ್ ವಿಫಲರಾದರು. ಲಸಿಕೆ ಗೊಂದಲದ ಬಗ್ಗೆ ಸ್ಪಷ್ಟ ಉತ್ತರ ಕೊಡದೇ ಹೊರಟ ಹೋದರು. ಸಿಎಂ ಹೇಳಿಕೆ ಮತ್ತು ನಿಮ್ಮ ಹೇಳಿಕೆಗಳು ಗೊಂದಲ ಹುಟ್ಟಿಸಿವೆ ಅಂತ ಕೇಳಿದ ಪ್ರಶ್ನೆಗೆ ಸ್ಪಷ್ವವಾದ ಉತ್ತರ ನೀಡದೇ ತೆರಳಿದ್ದಾರೆ.
ನಿನ್ನೆ ರಾತ್ರಿ 10 ಗಂಟೆಗೆ ಕೇಂದ್ರದಿಂದ ಸೂಚನೆ ಬಂದಿತ್ತು. ಅದರ ಪ್ರಕಾರ ಸಿಎಂ ಇಂದು ಸಾಂಕೇತಿಕ ಚಾಲನೆ ನೀಡಿದರು. ಸೀರಮ್ ಇನ್ಸ್ಸ್ಟಿಟ್ಯೂಟ್ನಿಂದ ಒಟ್ಟು 1 ಕೋಟಿ ಲಸಿಕೆ ಕೇಳಿದ್ದೇವೆ. ಆ ಪೈಕಿ ನಿನ್ನೆ 3 ಲಕ್ಷ ಕೋವಿಶೀಲ್ಡ್ ಲಸಿಕೆ ಪೂರೈಕೆ ಮಾಡಿದ್ದಾರೆ ಎಂದು ವಿವರಿಸಿದರು. ಆದರೆ, ಸಿಎಂ 3 ಲಕ್ಷದ ಜೊತೆಗೆ 1 ಲಕ್ಷ ಹೆಚ್ಚುವರಿ ಲಸಿಕೆ ಇದೆ ಎಂದಿದ್ದು, ಅದು ಎಲ್ಲಿಂದ ಬಂತು ಎಂದು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೇ ತೆರಳಿದರು.
ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚುವರಿ ಬೆಡ್ ಮಾಡಲು ಸಮ್ಮತಿ: