ಕರ್ನಾಟಕ

karnataka

ETV Bharat / state

3 ಲಕ್ಷ ಸನಿಹದಲ್ಲಿ ಕೊರೊನಾ ಆ್ಯಕ್ಟೀವ್ ಕೇಸ್.. ರಾಜ್ಯಕ್ಕೆ ಯಾವ ಸ್ಥಾನ ಗೊತ್ತಾ!?

ಹಿರಿಯರು ಲಸಿಕೆ ಪಡೆದ ಕಾರಣ ಸೋಂಕಿನ ತೀವ್ರತೆಯಿಂದ ಪಾರಾಗುತ್ತಿದ್ದಾರೆ.‌ ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಅಂತ ವೈದ್ಯರಾದ ಡಾ. ಜಗದೀಶ್ ಹಿರೇಮಠ್ ಸಲಹೆ ನೀಡಿದ್ದಾರೆ.

dr-jagdish-hiremath-talk-about-corona-issue
ವೈದ್ಯ ಡಾ. ಜಗದೀಶ್ ಹಿರೇಮಠ್

By

Published : Apr 27, 2021, 4:10 PM IST

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈವರೆಗೆ ಬರೋಬ್ಬರಿ 13,68,945 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಸುಮಾರು 10,73,257 ಮಂದಿ ಗುಣಮುಖರಾಗಿದ್ದು, ಬರೋಬ್ಬರಿ 14,627 ಜನ ಮಾರಕ ಸೋಂಕಿಗೆ ಮೃತರಾಗಿದ್ದಾರೆ.‌ ಸದ್ಯ ಸಕ್ರಿಯ ಪ್ರಕರಣಗಳೇ ರಾಜ್ಯದಲ್ಲಿ 2,81,042 ಇದ್ದು, ಸೋಂಕಿತರ ಸಂಖ್ಯೆ 3 ಲಕ್ಷ ದಾಟಲಿದೆ. ಈ ಮೂಲಕ ಮತ್ತಷ್ಟು ಸೋಂಕು ತೀವ್ರ ಸ್ವರೂಪವನ್ನ ಪಡೆದುಕೊಳ್ಳುತ್ತಿದೆ.

ವೈದ್ಯ ಡಾ. ಜಗದೀಶ್ ಹಿರೇಮಠ್

ಕೊರೊನಾ ಸೋಂಕು ನಿಯಂತ್ರಣಕ್ಕೆ ಇಂದಿನಿಂದ 14 ದಿನಗಳ ಲಾಕ್​ಡೌನ್​ ಘೋಷಣೆಯನ್ನ ಸರ್ಕಾರ ಮಾಡಿದೆ. ಹೀಗಾಗಿ ಜನರು ಮನೆಯಲ್ಲಿಯೇ ಸುರಕ್ಷಿತವಾಗಿ ಇರುವುದು ಉತ್ತಮ ಅಂತಾರೆ ತಜ್ಞರು. ಅದರಲ್ಲೂ ರಾಜಧಾನಿ‌ ಬೆಂಗಳೂರಿನಲ್ಲೇ ನಿತ್ಯ 15 ಸಾವಿರಕ್ಕೂ ಹೆಚ್ಚು ಸೋಂಕು‌ ಕಾಣಿಸಿಕೊಳ್ಳುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.‌

ದೇಶದಲ್ಲಿ ರಾಜ್ಯಕ್ಕೆ 3ನೇ ಸ್ಥಾನ

ಮಹಾರಾಷ್ಟ್ರ, ಉತ್ತರ ಪ್ರದೇಶದ ಸಕ್ರಿಯ ಪ್ರಕರಣಗಳ ನಂತರ ಕರ್ನಾಟಕದಲ್ಲೀ ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನ ಕಾಣಬಹುದು. ಹೀಗೆ ಲಕ್ಷ ಸೋಂಕಿತರ ಪಟ್ಟಿಯನ್ನ ನೋಡುವುದಾದರೆ, ಕರ್ನಾಟಕಕ್ಕೆ ಹೊಂದಿಕೊಂಡ ರಾಜ್ಯಗಳಿಂದಲ್ಲೇ ಸೋಂಕು ಹೆಚ್ಚಾಯಿತಾ ಅನ್ನೋ ಪ್ರಶ್ನೆ ಮೂಡುತ್ತೆ.

ಟಾಪ್ -8 ಆಕ್ಟೀವ್ ಕೇಸ್ ರಾಜ್ಯಗಳು

ಮಹಾರಾಷ್ಟ್ರ 6,74,770
ಉತ್ತರ ಪ್ರದೇಶ 3,04,199
ಕರ್ನಾಟಕ 2,81,042
ಕೇರಳ 2,32,808
ರಾಜಸ್ಥಾನ 1,46,640
ಗುಜರಾತ್ 1,21,461
ಛತ್ತೀಸ್​ಘಡ 1,21,352
ತಮಿಳುನಾಡು 1,07,145

2ನೇ ಅಲೆಯ ಸಂಬಂಧ ಜನರಿಗೆ ವೈದ್ಯರು ಹಾಗೂ ಸರ್ಕಾರ ಎಷ್ಟೇ ಎಚ್ಚರಿಕೆಯನ್ನ‌‌‌ ನೀಡಿದರೂ ನಿರ್ಲಕ್ಷ್ಯ ಮಾಡಿದ ಪರಿಣಾಮ ಈಗ ನಿತ್ಯ ಸೋಂಕು ಉಲ್ಬಣಗೊಳ್ಳುತ್ತಿದೆ. ಆದಷ್ಟು ಯುವಕರೇ ಹೆಚ್ಚು ಸೋಂಕಿಗೆ ತುತ್ತಾಗುತ್ತಿದ್ದು, ಕೊಂಚ ಎಚ್ಚರಿಕೆಯಿಂದ ಇರಬೇಕು. ಹಿರಿಯರು ಲಸಿಕೆ ಪಡೆದ ಕಾರಣ ಸೋಂಕಿನ ತೀವ್ರತೆಯಿಂದ ಪಾರಾಗುತ್ತಿದ್ದಾರೆ.‌ ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಅಂತ ವೈದ್ಯರಾದ ಡಾ. ಜಗದೀಶ್ ಹಿರೇಮಠ್ ಸಲಹೆ ನೀಡಿದ್ದಾರೆ.

ಓದಿ:14 ದಿನ ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇರಿ : ಜನತೆಗೆ ಗೃಹ ಸಚಿವ ಬೊಮ್ಮಾಯಿ ಮನವಿ

ABOUT THE AUTHOR

...view details